ಕರ್ನಾಟಕ

karnataka

ETV Bharat / briefs

ಭಯೋತ್ಪಾದಕರಿಗೆ ಗೊತ್ತಾಗದ ಸರ್ಜಿಕಲ್ ಸ್ಟ್ರೈಕ್ ಯಾವುದದು? ಮೋದಿ ವ್ಯಂಗ್ಯ

ಯುಪಿಎ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ಸ್ಟ್ಕೈಕ್ ಮಾಡಲಾಗಿದೆ ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಸುದ್ದಿಗೋಷ್ಠಿ ನಡೆಸಿ ತಾರೀಖು ಸಮೇತ ಮಾಹಿತಿ ನೀಡಿದ್ದರು. ಇವತ್ತು ಕಾಂಗ್ರೆಸ್ ಪಕ್ಷದ ಹೇಳಿಕೆಗೆ ಮೋದಿ ತಿರುಗೇಟು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ

By

Published : May 3, 2019, 4:29 PM IST

ಸಿಕರ್‌(ರಾಜಸ್ತಾನ):ಕಾಂಗ್ರೆಸ್ ತನ್ನ ಅವಧಿಯಲ್ಲಿ ಆರು ಬಾರಿ ಪಾಕಿಸ್ತಾನ ವಿರುದ್ಧ ಸರ್ಜಿಕಲ್ ದಾಳಿ ನಡೆಸಿರೋದಾಗಿ ಹೇಳಿಕೊಂಡಿದೆ. ಭಯೋತ್ಪಾದಕರಿಗೆ ಗೊತ್ತಾಗದೇ ನಡೆದ ದಾಳಿ ಯಾವುದು? ಅಂಥ ದಾಳಿ ನಡೆದಿರುವ ಬಗ್ಗೆ ಸ್ವತ: ಪಾಕಿಸ್ತಾನಕ್ಕೂ ತಿಳಿದಿಲ್ಲ, ಹೋಗಲಿ ದೇಶದ ಜನತೆಗಾದ್ರೂ ಗೊತ್ತಾಬೇಕಿತ್ತಲ್ವಾ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದರು.

ರಾಜಸ್ತಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮೋದಿ

UPA ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​​! ದಿನಾಂಕ ಸಹಿತ ಮಾಹಿತಿ ನೀಡಿದ ರಾಜೀವ್​ ಶುಕ್ಲಾ

ರಾಜಸ್ತಾನದ ಸಿಕರ್‌ನಲ್ಲಿ ಚುನಾವಣಾ ಪ್ರಚಾರಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪುಲ್ವಾಮ ರಕ್ತಪಾತದ ನಂತರ ಪಾಕ್‌ ವಿರುದ್ಧ ನಡೆದ ವಾಯುದಾಳಿಯನ್ನು ಕಾಂಗ್ರೆಸ್ಸಿಗರು ಮೊದಲು ಪ್ರಶ್ನಿಸಿದರು. ಆ ಬಳಿಕ ಸಂಶಯ ವ್ಯಕ್ತಪಡಿಸಿದ್ದೂ ಅಲ್ದೇ ತಮಾಷೆ ಮಾಡಿದರು ಎಂದು ಇದೇ ವೇಳೆ ಕೈ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗ ನಾವೂ ಭಯೋತ್ಪಾದಕರ ದಾಳಿ ನಡೆಸಿದ್ದೇವೆ ಎಂದು 'ಮೀಟೂ ಮೀಟೂ' ಅಂತಿದ್ದಾರೆ ಎಂದು ತಮಾಷೆ ಮಾಡಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಐಪಿಎಲ್​​ನಲ್ಲಿ ಯುವಕರಿಗೆ ಹೆಚ್ಚಿನ ಆಸಕ್ತಿ ಇದೆ. ಆದರೆ ಈ ಹಿಂದೆ ಚುನಾವಣೆ ನೆಪವೊಡ್ಡಿ 2009 ಹಾಗೂ 2014ರಲ್ಲಿ ದೇಶದಿಂದ ಹೊರಗಡೆ ಈ ಟೂರ್ನಿ ಆಡಿಸಲಾಯಿತು. ಇದೀಗ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಐಪಿಎಲ್​ ಕೂಡ ಇಲ್ಲೇ ನಡೆಯುತ್ತಿದೆ ಎಂದು ತಿಳಿಸಿದರು. ಈ ಹೇಳಿಕೆ ಮೂಲಕ ಇವತ್ತು ದೇಶದ ಭದ್ರತೆ ಅತ್ಯುತ್ತಮ ಸರ್ಕಾರದ ಕೈಯಲ್ಲಿದೆ ಎನ್ನುವ ಸಂದೇಶವನ್ನು ಮೋದಿ ಮತದಾರರಿಗೆ ರವಾನಿಸಿದರು.

ABOUT THE AUTHOR

...view details