ಕರ್ನಾಟಕ

karnataka

ETV Bharat / briefs

ಗಂಗಾವತಿಯಲ್ಲಿ ಮೋದಿ ಹವಾ, ಕನ್ನಡದಲ್ಲೇ ಭಾಷಣ... ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ

By

Published : Apr 12, 2019, 3:38 PM IST

Updated : Apr 12, 2019, 5:36 PM IST

2019-04-12 16:22:44

ಗಂಗಾವತಿಯಲ್ಲಿ ನಮೋ ಕನ್ನಡದಲ್ಲೇ ಭಾಷಣ... ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಭರ್ಜರಿ ಟಾಂಗ್​!

ಪ್ರಧಾನಿ ಮೋದಿ ಭಾಷಣ

ಗಂಗಾವತಿ:ಭತ್ತದ ನಾಡು ಕೊಪ್ಪಳದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಮತಬೇಟೆ ನಡೆಸಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ, ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ನಮೋ ನೇರ ವಾಗ್ದಾಳಿ ನಡೆಸಿದರು. 

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೆನೆಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ರೈತರ ಸಾಲಮನ್ನಾ ಆಗಿಲ್ಲ. ಕೃಷಿ ಸಮ್ಮಾನ್​ ಯೋಜನೆಗೂ ಅಡ್ಡಗಾಲು ಹಾಕಿದ್ದೀರಿ. ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರುತ್ತಾರೆಂದು ಕುಮಾರಸ್ವಾಮಿ ಅಣುಕಿಸಿದ್ದಾರೆ. ಇಂತಹ ಹೇಳಿಕೆ ಯಾವ ಆಧಾರದ ಮೇಲೆ ಹೇಳಿದ್ದೀರಿ. ಭಾರತೀಯ ಸೇನೆ ನೀವೂ ಮಾಡುತ್ತಿರುವ ಅಪಮಾನವಿದು ಎಂದರು.

2019-04-12 15:29:10

ಸಮ್ಮಿಶ್ರ ಸರ್ಕಾರಕ್ಕೆ ಭರ್ಜರಿ ಟಾಂಗ್​... ಕರ್ನಾಟಕದಲ್ಲಿರುವುದು 20 ಪರ್ಸೆಂಟೇಜ್​ ಸರ್ಕಾರ!

  • ನಾನು ಚೌಕಿದಾರ್​
  • ಹಳ್ಳಿ-ಹಳ್ಳಿಗಳಲ್ಲೂ, ನಗರ-ನಗರಗಳಲ್ಲೂ , ಮನೆಮನೆಯಲ್ಲೂ, ಊಳುವ ಭೂಮಿಯಲ್ಲೂ, ದೇಶದ ಗಡಿಯಲ್ಲೂ, ಶಿಕ್ಷಕ, ಫ್ರೊಪೇಸರ್​, ರೈತ,ಕಾರ್ಮಿಕ,ವಿದ್ಯಾರ್ಥಿಗಳು ಎಲ್ಲರೂ ಚೌಕಿದಾರ್​ಗಳೇ. ಇವರೆಲ್ಲರೂ ಮೋಡಿ ಮಾಡಿದ್ದಾರೆ.
  • ಭಾಷಣದಲ್ಲಿ ಕೊನೆಯಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಪ್ರಧಾನಿ ಮೋದಿ ಮತದಾರರ ಮನ ಸೆಳೆಯುವ ಪ್ರಯತ್ನ ಮಾಡಿದರು.
  • ಜನತೆ ಮತ್ತೆ ಫೀರ್​ ಏಕ್​ ಬಾರ್ ಮೋದಿ ಎಂಬುದನ್ನು ತೋರಿಸಿದ್ದಾರೆ
  • ಭಾರಿ ಸಂಖ್ಯೆಯಲ್ಲಿ ಸೇರಿದ ಜನರಿಂದ ಮೋದಿ ಮೋದಿ ಪರ ಜಯಘೋಷ
  • ನೀವೆಲ್ಲ ಚೌಕಿದಾರ್​ ಗೆ ಬಲ ನೀಡಿ ಎಂದು ಮನವಿ 
  • ಮೊದಲ ಹಂತದ ಚುನಾವಣೆ ವಿಪಕ್ಷಗಳಿಗೆ ಸ್ಪಷ್ಟ ಸಂದೇಶ ಸಾರಿದೆ 
  • ಪಶ್ಚಿಮ ಬಂಗಾಳದಲ್ಲಿ ಭಾರಿ ಮತದಾನವಾಗಿದೆ 
  • ಜನತೆ ಮತ್ತೆ ಫೀರ್​ ಏಕ್​ ಬಾರ್ ಮೋದಿ ಎಂಬುದನ್ನು ತೋರಿಸಿದ್ದಾರೆ
  • ಈ ಘೋಷಣೆ ಬಿಎಸ್​​ವೈ ಗೆ ಖುಷಿ ನೀಡಬಹುದು
  • ತುಂಗಭದ್ರಾ ನೀರಾವರಿ ಯೋಜನೆ ಮತ್ತಷ್ಟು ಸುಧಾರಿಸಲು ನಮ್ಮ ಸರ್ಕಾರ ಬದ್ಧವಾಗಿದೆ
  • ಸಹೋದರ, ಸಹೋದರಿಯೇ ನಾವು ಎಲ್ಲರ ಏಳಿಗೆಗೆ ಬದ್ಧವಾಗಿದ್ದೇವೆ
  • ಭಾರಿ ಸಂಖ್ಯೆಯಲ್ಲಿ ಸೇರಿದ ಜನರಿಂದ ಮೋದಿ ಮೋದಿ ಪರ ಜಯಘೋಷ
  • ಪಾಕಿಸ್ತಾನದ ಸುಳ್ಳು ಆರೋಪಗಳು ಇನ್ಮುಂದೆ ನಡೆಯುವುದಿಲ್ಲ 
  • ಕರ್ನಾಟಕದ ಭತ್ತದ ಕಣಜಕ್ಕೆ ನೀರಿಲ್ಲದಂತಾಗಿದೆ
  • ಅರ್ಹ ರೈತರ ಲಿಸ್ಟ್​  ಕಳುಹಿಸುವಲ್ಲಿ ಹಿಂದೆ ಮುಂದು ಮಾಡಿದೆ
  • ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ಬಾಣ 
  • 60 ವರ್ಷ ದಾಟಿದ ರೈತರಿಗೆ ಪಿಂಚಣಿ ಕೊಡುತ್ತೇವೆ; ಮೋದಿ ವಾಗ್ದಾನ 
  • ಈ ಘೋಷಣೆ ಬಿಎಸ್​​ವೈ ಗೆ ಖುಷಿ ನೀಡಬಹುದು
  • ತುಂಗಭದ್ರಾ ನೀರಾವರಿ ಯೋಜನೆ ಮತ್ತಷ್ಟು ಸುಧಾರಿಸಲು ನಮ್ಮ ಸರ್ಕಾರ ಬದ್ಧವಾಗಿದೆ
  • ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಸರ್ಕಾರ ಏನು ಮಾಡಿದೆ
  • ನಾವು 3 ಕೋಟಿ ರೈತರ ಖಾತೆಗಳಿಗೆ ಹಣ ಹಾಕಿದ್ದೇವೆ
  • ಆದರೆ ಕರ್ನಾಟಕ ಸರ್ಕಾರ ಸರಿಯಾಗಿ ರೈತರ ಲಿಸ್ಟ್​ ಕಳುಹಿಸಿಲ್ಲ
  • ಕುಮಾರಸ್ವಾಮಿ ಅವರ ಹೃದಯದಲ್ಲಿರುವುದನ್ನೇ ಹೇಳಿದ್ದಾರೆ
  • ಚಿನ್ನದ ಚಮಚಾ ಬಾಯಲ್ಲಿಟ್ಟುಕೊಂಡು ಜನಿಸಿದವರಿಂದ ಇಂತಹುದೇ ಮಾತು ಬರುವುದು
  • ಪಾಕಿಸ್ತಾನದ ಸುಳ್ಳು ಆರೋಪಗಳು ಇನ್ಮುಂದೆ ನಡೆಯುವುದಿಲ್ಲ 
  • ನಮ್ಮ ಯೋಧರು ಗಡಿಯಲ್ಲಿ 40 ಡಿಗ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ
  • ತಿಂಗಳುಗಟ್ಟಲೇ ಸಮುದ್ರದಲ್ಲಿ ವಿರೋಧಿಗಳನ್ನು ಎದುರಿಸಿ ಸೈನಿಕರು ನಿಲ್ಲುತ್ತಿದ್ದಾರೆ
  • ಇಂತಹ ವೀರ ಯೋಧರ ಬಗ್ಗೆ ಕುಮಾರಸ್ವಾಮಿ ಅಪ್ಪಿತಪ್ಪಿಯೂ ಈ ರೀತಿ  ಮಾತನಾಡಬೇಡಿ
  • ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ದೇಶದ ಸುರಕ್ಷತೆಯ ಬಗ್ಗೆ ಯಾವುದೇ ಗೌರವ ನೀಡುತ್ತಿಲ್ಲ 
  • ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ನಮ್ಮ ವೀರ ಯೋಧರಿಗೆ ಅಪಮಾನ ಮಾಡುತ್ತಿದೆ 
  • ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆದ ಮೋದಿ
  • ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ ಪ್ರಧಾನಿ ಮೋದಿ 
  • ಭಾಷಣಕ್ಕೆ ಜೈಕಾರ ಹಾಕುವ ಮೂಲಕ ಅಡ್ಡಿ ಪಡಿಸಬೇಡಿ 
  • ರಾಜ್ಯಾಧ್ಯಕ್ಷರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ 
  • ಕೆಲಕಾಲ ಜೈಕಾರ ಹೆಚ್ಚಾಗಿದ್ದರಿಂದ ಭಾಷಣ ನಿಲ್ಲಿಸಿದ ಮೋದಿ 
  • ಕರ್ನಾಟಕದ ಸಿಎಂ ಹೇಳ್ತಾರೆ, ನಮ್ಮ ಸೇನೆಗೆ ಯಾರೇ ಹೋದರೂ ಹೊಟ್ಟೆಗೆ ಹಿಟ್ಟಿಲ್ಲದೇ ಹೋಗ್ತಿದ್ದಾರೆ  ಎಂದು 
  • ಕುಮಾರಸ್ವಾಮಿ ಇದು ನಿಜವೇ?  ನೀವು ಹೀಗೆ ಹೇಳುವುದು ಎಷ್ಟು ಸರಿ
  • ಬಡ ಮಕ್ಕಳಿಗಾಗಿ ಇಟ್ಟ ಹಣವನ್ನ ಕಾಂಗ್ರೆಸ್​ ಸರ್ಕಾರ ಬಳಕೆ ಮಾಡಿಕೊಂಡಿದೆ, ಅನೇಕ ನಾಯಕರು ಇದನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
  • ಮಧ್ಯಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನೂರಾರು ಕೋಟಿ ರೂ ಹೈಕಮಾಂಡ್​ಗೆ ಕೊಟ್ಟಿದೆ
  • ರಕ್ಷಣೆ, ಹೆಲಿಕಾಪ್ಟರ್​, ಭೂಮಿ ಹೀಗೆ ಎಲ್ಲದರಲ್ಲೂ ಕಾಂಗ್ರೆಸ್​ ಡೀಲ್ ಮಾಡಿದೆ
  • ಐದು ವರ್ಷಗಳಲ್ಲಿ ಅಧಿಕಾರ ಇಲ್ಲದೇ ಕಾಂಗ್ರೆಸ್​​  ಕಂಗೆಟ್ಟಿದೆ 
  • ಕುಟುಂಬದ ಮಿಷನ್​ ಏನೆಂದರೆ ಪರ್ಸೆಂಟೇಜ್​
  • ಈ ಹಿಂದೆ 10 ಪರ್ಸೆಂಟೇಜ್​ ಸರ್ಕಾರ ಇತ್ತು.
  • ಈಗ 20 ಪರ್ಸೆಂಟೇಜ್​ ಸರ್ಕಾರ ಇದೆ 
  • 2019 ರ ಚುನಾವಣೆ ರಾಷ್ಟ್ರವಾದ ಮತ್ತು ಕುಟುಂಬವಾದದ ನಡುವೆ ನಡೆಯುತ್ತಿರುವ ಚುನಾವಣೆ  
  • ನಮ್ಮದು ನೇಷನ್​ ಫಸ್ಟ್​ ... ಅವರದು ಫ್ಯಾಮಿಲಿ ಫಸ್ಟ್​
  • ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಮೋದಿ 
  • ದೇವೇಗೌಡ ಪುತ್ರ ರೇವಣ್ಣ ಹೇಳಿದ್ದಾರೆ ಮೋದಿ ಆರಿಸಿ ಬಂದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು, ಈ ಮೊದಲು ದೇವೇಗೌಡರು ದೇಶ ಬಿಟ್ಟು ಹೋಗುವೆ ಅಂದಿದ್ದರು.
  • ಪ್ರತಿಪಕ್ಷಗಳು ಮೋದಿ ಹಣಿಯಲು ಹವಣಿಸುತ್ತಿವೆ
  • ಪ್ರಧಾನಿ ಮೋದಿ ಗಂಗಾವತಿಗೆ ಆಗಮನ
  • ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗಿ 
  • ಸೇರಿದ ಜನರತ್ತ ಕೈಬೀಸಿದ ಪ್ರಧಾನಿ 
  • ಪ್ರಧಾನಿ ಮೋದಿಗೆ ಸನ್ಮಾನಿಸಿದ ಶಾಸಕ ಪರಣ್ಣ ಮುನವಳ್ಳಿ
  • ನರೇಂದ್ರ ಮೋದಿಗೆ ಬೆಳ್ಳಿಗದೆ ನೀಡಿ ಸನ್ಮಾನ
  • ಈ ಭೂಮಿಯಲ್ಲಿ ಜನಿಸಿದ ಎಲ್ಲ ಮಹಾತ್ಮರಿಗೆ ನನ್ನ ನಮನಗಳು
  • ನಾನು ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಬಂದಿದ್ದೇನೆ
  • ಈ ದೃಶ್ಯ ನೋಡಿದರೆ ಇಲ್ಲಿ ಮೋದಿ ಹವಾ ಎಷ್ಟಿದೆ ಎಂಬುದು ಗೊತ್ತಾಗುತ್ತದೆ
  •  ಮೋದಿ ಫೀರ್​ ಏಕ್​ ಬಾರ್​ ... ಎಂಬ ಘೋಷಣೆ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ
  • ಈ ಕ್ಷೇತ್ರದ ದೇವಿ- ದೇವರಿಗೆ ನಮಸ್ಕಾರ
  • ರಾಮನವಮಿಗೆ ಮುನ್ನ ಶ್ರೀ ರಾಮನ ಸೇವಕ ಹನುಮನ ಆಶೀರ್ವಾದ ಪಡೆದಿದ್ದೇನೆ
  • ರಾಮನ ಬಂಟನ ನಾಡಲ್ಲಿ ನಿಂತು ಈ ಪ್ರಧಾನ ಸೇವಕ ಘೋಷಣೆ ಮಾಡುತ್ತಿದ್ದೇನೆ 
  • ಭೂಮಿಯಿಂದ ಅಂತರಿಕ್ಷದವರೆಗೆ ಭಾರತದ ಹವಾ ಹರಡಿದೆ.
  • ನಿಮ್ಮ ಪ್ರೀತಿ ನನಗೆ ಮತ್ತಷ್ಟು ಶಕ್ತಿ ನೀಡಿದೆ
  • ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು
  • ಗಂಗಾವತಿಯಲ್ಲಿ  ಮೋದಿ ಹವಾ ಜೋರಾಗಿದೆ. ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ
  • ಪ್ರತಿಪಕ್ಷಗಳ ನಾಯಕರು ಮೋದಿ ಹಣಿಯಲು ಹವಣಿಸುತ್ತಿದ್ದಾರೆ
Last Updated : Apr 12, 2019, 5:36 PM IST

ABOUT THE AUTHOR

...view details