ಕರ್ನಾಟಕ

karnataka

ETV Bharat / briefs

ಸ್ಪಿನ್​ಬೌಲರ್​ ಎದುರು ಆಡಲು ಅಂದು ನನಗೆ ನೆರವಾಗಿದ್ದು ದ್ರಾವಿಡ್​ 'ಬ್ರದರ್​': ಕೆವಿನ್​ ಪೀಟರ್​ಸನ್

ಕೆವಿನ್​ ಪೀಟರ್​ಸನ್​ ಇಂಗ್ಲೆಂಡ್​ ಕಂಡ ಶ್ರೇಷ್ಠ ಕ್ರಿಕೆಟಿಗ. ಕ್ರಿಕೆಟ್​ ಜಗತ್ತಿಗೆ  'ಸ್ವಿಚ್​ ಹಿಟ್'​ ಎಂಬ ಹೊಸ ಹೊಡೆತವನ್ನು ಪರಿಚಯಿಸಿದ ಈತ ಒಂದು ಕಾಲದಲ್ಲಿ ಯಾವುದೇ ಬೌಲರ್​ಗೆ ಎದರದೇ ಕೆಚ್ಚೆದೆಯಿಂದ ಆಡುತ್ತಿದ್ದ. ಆದರೆ ಕಾಲಕ್ರಮೇಣ ಸ್ಪಿನ್​ಬೌಲರ್​ ಎದುರು ಸುಲಭವಾಗಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದು ಸಂಕಷ್ಟ ಎದುರಿಸಿದ್ದರು. ಆದರೆ ಭಾರತದ ದಿಗ್ಗಜ ದ್ರಾವಿಡ್​ರಿಂದ ತಮ್ಮ ಸಮಸ್ಯೆ ಬಗೆಹರಿಯಿತೆಂದು ತಿಳಿಸಿದ್ದಾರೆ.

By

Published : May 27, 2019, 9:03 PM IST

Updated : May 27, 2019, 9:14 PM IST

ivc

ಮುಂಬೈ: ಕ್ರಿಕೆಟ್​ ಜಗತ್ತಿನಲ್ಲಿ ಹಲವು ಹೊಸ ಹೊಡೆತಗಳನ್ನು ಪರಿಚಯಿಸಿದ ಇಂಗ್ಲೆಂಡ್​ ಕಂಡ ಗ್ರೇಟ್ ​ಕ್ರಿಕೆಟ್​ ಪ್ಲೇಯರ್​ ಕೆವಿನ್​ ಪೀಟರ್​ಸನ್​ 'ಕನ್ನಡಿಗ ದ್ರಾವಿಡ್​ರಿಂದ ಸ್ಪಿನ್​ ಬೌಲರ್​ಗಳ ಎದುರಿಸುವುದಕ್ಕೆ ಸಲಹೆ ಪಡೆದುಕೊಂಡಿದ್ದೆ' ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಕೆವಿನ್​ ಪೀಟರ್​ಸನ್​ ಇಂಗ್ಲೆಂಡ್​ ಕಂಡ ಶ್ರೇಷ್ಠ ಕ್ರಿಕೆಟಿಗ. ಕ್ರಿಕೆಟ್​ ಜಗತ್ತಿಗೆ 'ಸ್ಚಿಚ್​ ಹಿಟ್'​ ಎಂಬ ಹೊಸ ಹೊಡೆತವನ್ನು ಪರಿಚಯಿಸಿದ ಈತ ಒಂದು ಕಾಲದಲ್ಲಿ ಯಾವುದೇ ಬೌಲರ್​ಗೆ ಎದರದೇ ಕೆಚ್ಚೆದೆಯಿಂದ ಆಡುತ್ತಿದ್ದ. ಆದರೆ ಕಾಲಕ್ರಮೇಣ ಸ್ಪಿನ್​ಬೌಲರ್​ ಎದುರು ಸುಲಭವಾಗಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದು ಸಂಕಷ್ಟ ಎದುರಿಸಿದ್ದರು. ಆದರೆ ಭಾರತದ ದಿಗ್ಗಜ ದ್ರಾವಿಡ್​ರಿಂದ ತಮ್ಮ ಸಮಸ್ಯೆ ಬಗೆಹರಿಯಿತೆಂದು ತಿಳಿಸಿದ್ದಾರೆ.

ವಾಟ್​ ದಿ ಡಕ್​ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಿರೂಪಕ ದ್ರಾವಿಡ್​ ರನ್ನು ಬೇಟಿ ಮಾಡಿ ಸ್ಪಿನ್​ಬೌಲರ್​ಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ಕೇಳಿದ್ದರ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ಕೆವಿನ್ ​'' ಶೇನ್​ ವಾರ್ನ್​,ಮುರುಳೀದರನ್​,ವಿಟೋರಿಯಂತ ಸ್ಪಿನ್ನರ್​ಗಳಿಗೆ ತುಂಬಾ ಚೆನ್ನಾಗಿ ಆಡುತ್ತಿದ್ದ ನನಗೆ ಡಿಆರ್​ಎಸ್​ ಜಾರಿಗೆ ಬಂದ ಮೇಲೆ ಹೆಚ್ಚು ಎಲ್​ಬಿ ಬಲೆಗೆ ಬೀಳುತ್ತಿದ್ದೆ. ಅದೇ ಸಂದರ್ಭದಲ್ಲಿ ಐಪಿಎಲ್​ ಆರಂಭವಾಗಿ ನನಗೆ ದ್ರಾವಿಡ್​,ಕಾಲೀಸ್​ರಂತಹ ಆಟಗಾರರ ಜೊತೆ ಆಡುವ ಅವಕಾಶ ಸಿಕ್ಕಿತು,

ಈ ವೇಳೆ ದ್ರಾವಿಡ್​ರನ್ನು ಸ್ಪಿನ್​ ಬೌಲರ್​ ಎದುರು ಹೇಗೆ ಆಡಬೇಕೆಂದು ಸಲಹೆ ಕೇಳಿದ್ದೆ, ಇದಕ್ಕೆ ನೆರವಾಗಿದ್ದ ದ್ರಾವಿಡ್​ ನನಗೆ ಮೇಲ್​ ಮಾಡಿ, ಅದರಲ್ಲಿ ಸ್ಪಿನ್​ ಬೌಲಿಂಗ್​ ಹೇಗೆ ಎದುರಿಸಬೇಕೆಂದು ಸಂಪೂರ್ಣ ಮಾಹಿತಿ ನೀಡಿದ್ದರು. ಅದರ ಪ್ರಕಾರ ಅಭ್ಯಾಸ ಮಾಡಿ, ನನ್ನಲ್ಲಿ ಅಳವಡಿಸಿಕೊಂಡೆ ಎಂದು ದ್ರಾವಿಡ್​ ಸಹಾಯವನ್ನು ನೆನೆದಿದ್ದಾರೆ.

Last Updated : May 27, 2019, 9:14 PM IST

ABOUT THE AUTHOR

...view details