ಟ್ರೆಂಟ್ಬ್ರಿಡ್ಜ್:ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಪ್ರದರ್ಶನ ತೋರಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಕೇವಲ 105 ರನ್ಗಳಿಗೆ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಹೋಲ್ಡರ್ ಪಡೆ ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿತ್ತು.
ವೇಗಿಗಳಾದ ಓಶಾನೆ ಥೋಮಸ್, ಜೇಸನ್ ಹೋಲ್ಡರ್ ಬಿರುಸಿನ ಬೌಲಿಂಗ್ಗೆ ತತ್ತರಿಸಿದ ಸರ್ಫರಾಜ್ ಪಡೆ ನೂರು ರನ್ ಗಳಿಸುವಷ್ಟರಲ್ಲಿ ಸುಸ್ತಾಯಿತು. ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಗಳಿಸಿದ ತಲಾ 22 ರನ್ ವೈಯಕ್ತಿಕ ಗರಿಷ್ಠ ಸ್ಕೋರ್.