ಕರ್ನಾಟಕ

karnataka

ETV Bharat / briefs

ಅನೈತಿಕ ಚಟುವಟಿಕೆಗಳ ಗೂಡಾದ ನಿರ್ವಹಣೆ ಇಲ್ಲದ ಸರ್ಕಾರಿ ಕಟ್ಟಡಗಳು

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಿರ್ವಹಣೆ ಇಲ್ಲದೇ ಬಳಕೆ ಯೋಗ್ಯ ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಟ್ಟಡಗಳ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಕಟ್ಟಡಗಳು

By

Published : Jun 7, 2019, 2:37 PM IST

ಶಿರಸಿ:ನಗರದ ವಿವಿಧ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿ ಗೃಹಗಳು ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿವೆ. ಇನ್ನು ಬಳಕೆಗೆ ಯೋಗ್ಯವಿರುವ ಕಟ್ಟಡಗಳ ಸುತ್ತ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವುದರ ಜತೆಗೆ, ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸರ್ಕಾರಕ್ಕೆ ಮತ್ತೊಂದು ಹೊರೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿ‌ಎಸ್ಎನ್ಎಲ್ ಕಚೇರಿ ಮತ್ತು ವಸತಿ ಗೃಹಗಳು, ಅಂಚೆ ಇಲಾಖೆ ವಸತಿ ಗೃಹ, ರಾಜ್ಯ ಸರ್ಕಾರದ ಅಡಿ ಬರುವ ರೇಷ್ಮೆ ಇಲಾಖೆಯ ಬೃಹತ್ ಕಟ್ಟಡ, ಶಿಕ್ಷಣ ಇಲಾಖೆಗೆ ಸೇರಿದ ಸಭಾ ಭವನಗಳು ಹೀಗೆ ಹತ್ತಾರು ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಳಾಗಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪಾಳು ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ನಿರ್ವಹಣೆ ಕೊರತೆಯಿಂದ ಸಾರ್ವಜನಿಕರ ತೆರಿಗೆ ಹಣ ನಷ್ಟವಾಗುತ್ತಿದೆ. ಆದರೆ, ಇದಕ್ಕೆ ಸಂಬಂಧ ಪಟ್ಟ ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ.

ಜಾಗದ ಕೊರತೆಯಿಂದ ಸಹಕಾರಿ ಇಲಾಖೆ , ಗ್ರಾಮೀಣ ಸಡಕ್ ಯೋಜನಾ ಕಚೇರಿ, ಆರ್​​ಟಿಒ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೆ ಕಚೇರಿಗಳನ್ನು ಸ್ಥಳಾಂತರಿಸಿದರೆ ಸರ್ಕಾರಕ್ಕೆ ಆಗುವ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿಸಬಹುದು. ಕೂಡಲೇ ಪರಿಶೀಲಿಸಿ ಶಿಥಿಲಗೊಂಡ ಕಟ್ಟಡವನ್ನು ಸರಿಪಡಿಸಿ ಹಾಗೂ ಸರ್ಕಾರಿ ಜಾಗದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಅಗತ್ಯವಿರುವ ಇಲಾಖೆಗಳಿಗೆ ಜಾಗವನ್ನು ನೀಡಿ ಸರ್ಕಾರದ ಆಸ್ತಿಯ ಸಮರ್ಪಕ ಬಳಕೆಗೆ ಮುಂದಾಗಬೇಕಿದೆ ಎಂದರು.

ABOUT THE AUTHOR

...view details