ಬೆಂಗಳೂರು: ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆದ ಅನೇಕ ಫಲಾನುಭವಿಗಳಿಗೆ ಎರಡನೇ ಡೋಸ್ ಕೊಡಬೇಕಿರುವ ಹಿನ್ನೆಲೆ, ಉಳಿದ ಎಲ್ಲಾ ವಯೋಮಾನದವರ ಲಸಿಕಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಧಿಕೃತ ಆದೇಶ ಇಂದು ಹೊರಬಿದ್ದಿದೆ.
ರಾಜ್ಯದಲ್ಲಿ ಲಭ್ಯ ಇರುವ ಲಸಿಕೆ ಎರಡನೇ ಡೋಸ್ ಕೊಡಲು ಮಾತ್ರ ಬಳಕೆ - ಲಸಿಕಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತ
ಜಿಲ್ಲೆಗಳು ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರ ಪೂರ್ಣಗೊಳಿಸಿರುವ ಹಾಗೂ ಕೋವ್ಯಾಕ್ಸಿನ್ ಪಡೆದು 6 ವಾರ ಪೂರ್ಣಗೊಳಿಸಿರುವ ಫಲಾನುಭವಿಗಳಿವೆ ಮೊದಲು ಲಸಿಕೆ ನೀಡುವಂತೆ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, 18 ವರ್ಷದಿಂದ 44 ವರ್ಷದವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಆದರೆ ಇದೇ ವಯೋಮಾನದವರಿಗೆ ಎರಡನೇ ಡೋಸ್ ಪಡೆಯಲು ಅರ್ಹ ಇರುವ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದೆ.
45 ಮೇಲ್ಪಟ್ಟ ವಯೋಮಾನದವರಿಗೆ ಖರೀದಿಸಿದ ಲಸಿಕೆಯನ್ನೂ ಎರಡನೇ ಡೋಸ್ ಕೊಡಲು ಬಳಕೆಗೆ ತೀರ್ಮಾನಿಸಲಾಗಿದೆ. ಎರಡನೇ ಡೋಸ್ ಲಸಿಕೆ ನೀಡುವ ಸಮಯದಲ್ಲಿ ಜಿಲ್ಲೆಗಳು ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರ ಪೂರ್ಣಗೊಳಿಸಿರುವ ಹಾಗೂ ಕೋವ್ಯಾಕ್ಸಿನ್ ಪಡೆದು 6 ವಾರ ಪೂರ್ಣಗೊಳಿಸಿರುವ ಫಲಾನುಭವಿಗಳಿವೆ ಮೊದಲು ಲಸಿಕೆ ನೀಡಲು ಸೂಚಿಸಲಾಗಿದೆ.