ಕರ್ನಾಟಕ

karnataka

ETV Bharat / briefs

ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರೋ ದೇವರಾಯನದುರ್ಗ.. ವಾನರ ಸೇನೆಯೂ ಮಾಯ..! - ದೇವರಾಯನದುರ್ಗ ಪ್ರವಾಸಿ ತಾಣ

ಪ್ರವಾಸಿಗರಿಂದ ಕುರುಕುಲು ತಿಂಡಿಗಳನ್ನು ತಿಂದು ತೇಗುತ್ತಿದ್ದ ಕಪಿಸೇನೆ ದೇವರಾಯನದುರ್ಗ ಅರಣ್ಯಪ್ರದೇಶವನ್ನು ಸೇರಿಕೊಂಡು ಹಣ್ಣುಹಂಪಲುಗಳನ್ನು ತಿನ್ನುತ್ತಿವೆ. ಒಂದು ರೀತಿ ಜನತಾ ಕರ್ಫ್ಯೂ ಕೂಡ ಕಪಿ ಸೇನೆಯನ್ನು ಅರಣ್ಯ ಪ್ರದೇಶಗಳನ್ನು ಹೋಗುವಂತೆ ಪರೋಕ್ಷವಾಗಿ ಪ್ರೇರೇಪಿಸಿದೆ

ದೇವರಾಯನದುರ್ಗ
ದೇವರಾಯನದುರ್ಗ

By

Published : May 1, 2021, 9:16 PM IST

ತುಮಕೂರು:ಪ್ರಸ್ತುತ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದೇವರಾಯನದುರ್ಗ ಪ್ರವಾಸಿಗರಿಲ್ಲದೇ ಪ್ರಸ್ತುತ ಅಕ್ಷರಶಃ ಬಿಕೋ ಎನ್ನುತ್ತಿದೆ.

ಇನ್ನೊಂದೆಡೆ ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಂದ ಆಹಾರ ಪಡೆಯಲು ಗುಂಪು - ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದ ವಾನರ ಸೇನೆಯೂ ಕಣ್ಮರೆಯಾಗಿದೆ.

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರೋ ದೇವರಾಯನದುರ್ಗ

ಜನತಾ ಕರ್ಫ್ಯೂಗೂ ಮುನ್ನ ನಿತ್ಯ ಏನಿಲ್ಲೆಂದರೂ 50ಕ್ಕೂ ಹೆಚ್ಚು ಮಂಗಗಳು ದೇವರಾಯನದುರ್ಗ ವ್ಯಾಪ್ತಿಯಲ್ಲಿರುವ ನಾಮದ ಚಿಲುಮೆ ಹಾಗೂ ಯೋಗಾನರಸಿಂಹ ಸ್ವಾಮಿ ದೇಗುಲದ ಸುತ್ತಲೂ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಪ್ರವಾಸಿಗರ ಸುಳಿವಿಲ್ಲ ಹೀಗಾಗಿ ನಿತ್ಯ ಆಹಾರ ನೀಡುವವರು ಇಲ್ಲದ ಪರಿಣಾಮ ಮಂಗಗಳು ಕೂಡ ಅರಣ್ಯ ಪ್ರದೇಶವನ್ನು ಸೇರಿಕೊಂಡಿವೆ.

ಇನ್ನು ಪ್ರವಾಸಿಗರಿಂದ ಕುರುಕುಲು ತಿಂಡಿಗಳನ್ನು ತಿಂದು ತೇಗುತ್ತಿದ್ದ ಕಪಿಸೇನೆ ದೇವರಾಯನದುರ್ಗ ಅರಣ್ಯಪ್ರದೇಶವನ್ನು ಸೇರಿಕೊಂಡು ಹಣ್ಣುಹಂಪಲುಗಳನ್ನು ತಿನ್ನುತ್ತಿವೆ. ಒಂದು ರೀತಿ ಜನತಾ ಕರ್ಫ್ಯೂ ಕೂಡ ಕಪಿ ಸೇನೆಯನ್ನು ಅರಣ್ಯ ಪ್ರದೇಶಗಳನ್ನು ಹೋಗುವಂತೆ ಪರೋಕ್ಷವಾಗಿ ಪ್ರೇರೇಪಿಸಿದೆ. ಇನ್ನೊಂದೆಡೆ ಮಂಗಗಳು ನಗರಪ್ರದೇಶಕ್ಕೆ ಹಿಂಡು ಹಿಂಡಾಗಿ ಬಂದರೂ ಕೂಡ ಹೆಚ್ಚಾಗಿ ಜನ ಸಂಚಾರವಿಲ್ಲದೇ ಆಹಾರ ಸಿಗುವುದು ದುಸ್ತರವಾಗಿದೆ.

ABOUT THE AUTHOR

...view details