ಮುಂಬೈ: ಭಾರತ ತಂಡದ ಕೋಚ್ ರವಿ ಶಾಸ್ತ್ರಿಯವರ ಗುತ್ತಿಗೆ ಸೇವಾ ಅವಧಿ ಏಕದಿನ ವಿಶ್ವಕಪ್‌ನ ಕೊನೆಯ ಪಂದ್ಯದವರಗೆ ಇದ್ದು, ಮರು ಆಯ್ಕೆ ಪ್ರಕ್ರಿಯೆಯಲ್ಲಿ ಅವರೂ ಪಾಲ್ಗೊಳ್ಳಬೇಕು ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾದ ಮೇಲೆ ಹಲವು ವಿದೇಶಿ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿ ಗೆದ್ದು ದಾಖಲೆ ಬರೆದಿತ್ತು. ಆದರೆ ಈ ಸಾಧನೆಯಿಂದಾಗಿ ಅವರನ್ನು ಕೋಚ್ ಆಗಿ ವಿಸ್ತರಣೆ ಮಾಡಬೇಕೆಂಬ ಯಾವುದೇ ಷರುತ್ತುಗಳಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಶಾಸ್ತ್ರಿಯವರ ಹಾಲಿ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆಯೇ ಬಿಸಿಸಿಐ ಹೊಸ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಆದರೆ ವಿಶ್ವಕಪ್ನಲ್ಲಿ ಭಾರತ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಶಾಸ್ತ್ರಿ ಸ್ಥಾನದ ಬಗ್ಗೆ ತಿಳಿಯಲಿದೆ.