ಮಂಚೇಶ್ವರ್(ಒಡಿಶಾ): ಮಾರಕ 'ಫಣಿ'ಗೆ ಒಡಿಶಾ ಸಂಪೂರ್ಣವಾಗಿ ತತ್ತರಿಸಿದ್ದು, ಜನರು ಭಾರಿ ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಆಗತಾನೇ ಹುಟ್ಟಿದ ಮಗುವಿಗೆ, ಜನರ ಕಷ್ಟನಷ್ಟಗಳಿಗೆ ಕಾರಣವಾಗುತ್ತಿರುವ ಚಂಡಮಾರುತದ ಹೆಸರನ್ನೇ ನಾಮಕರಣ ಮಾಡಿರುವ ವಿಚಾರ ಎಲ್ಲರ ಹುಬ್ಬೇರಿಸಿದೆ.
ಒಡಿಶಾದ ಮಂಚೇಶ್ವರ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 10:03ಕ್ಕೆ ಮಗುವೊಂದು ಜನಿಸಿದೆ. ಈ ಕಂದಮ್ಮನಿಗೆ ಪೋಷಕರು 'ಫಣಿ' ಎಂದು ಹೆಸರಿಟ್ಟಿದ್ದಾರೆ.