ಕರ್ನಾಟಕ

karnataka

ETV Bharat / briefs

ಅಮಿತ್ ಶಾ ಭೇಟಿಗೂ ಮುನ್ನ ಬಿಜೆಪಿ ಕಚೇರಿ ಮೇಲೆ ನಕ್ಸಲರಿಂದ ಬಾಂಬ್ ದಾಳಿ - ಬಾಂಬ್ ದಾಳಿ

ಶುಕ್ರವಾರದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಾರ್ಖಂಡ ರಾಜ್ಯಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಕೆಲವೇ ಗಂಟೆಗಳ ಮುಂದೆ ನಕ್ಸಲರು ಬಾಂಬ್ ದಾಳಿ ನಡೆಸಿದ್ದಾರೆ.

ಅಮಿತ್ ಶಾ

By

Published : May 3, 2019, 9:27 AM IST

Updated : May 3, 2019, 12:19 PM IST

ಖುಂಟಿ(ಜಾರ್ಖಂಡ್): ನಕ್ಸಲರು ತಮ್ಮ ಅಸ್ತಿತ್ವಕ್ಕಾಗಿ ಮತ್ತೆ ವಿಧ್ವಂಸಕ ಕೃತ್ಯಗಳ ಮೊರೆ ಹೋಗಿದ್ದು, ಜಾರ್ಖಂಡ್​ನ ಸರೈಕೆಲಾ ಜಿಲ್ಲೆಯ ಖರ್ಸವಾನ್​ನಲ್ಲಿರುವ ಬಿಜೆಪಿ ಕಚೇರಿ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಕೆಲವೇ ಗಂಟೆಗಳ ಮುಂದೆ ನಕ್ಸಲರು ಬಾಂಬ್ ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ ಗುರುವಾರ ತಡರಾತ್ರಿ 12.30ರ ಸುಮಾರಿಗೆ ಬಿಜೆಪಿ ಕಚೇರಿಗೆ ಬಾಂಬ್ ದಾಳಿ ಮಾಡಲಾಗಿದೆ. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ, ಖುಂಟಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.

ಅಮಿತ್ ಶಾ ಶುಕ್ರವಾರ ಖುಂಟಿ, ಕೊಡೆರ್ಮಾ ಹಾಗೂ ರಾಂಚಿಯಲ್ಲಿ ಸರಣಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

Last Updated : May 3, 2019, 12:19 PM IST

ABOUT THE AUTHOR

...view details