ಕರ್ನಾಟಕ

karnataka

ETV Bharat / briefs

24 ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಮುಲಾಯಂ-ಮಾಯಾವತಿ: ಮೈನಪುರಿಯಲ್ಲಿ ಬೃಹತ್​ ರ‍್ಯಾಲಿ

ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಇಂದು ಮೈನಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಪರವಾಗಿ ಮತಯಾಚನೆ ನಡೆಸಿದರು. ಬರೋಬ್ಬರಿ 24 ವರ್ಷಗಳ ಬಳಿಕ ಬೃಹತ್​ ರ‍್ಯಾಲಿಯಲ್ಲಿ ಭಾಗಿಯಾದರು. ಈ ಮೂಲಕ  ಬಿಎಸ್ಪಿ-ಎಸ್ಪಿ ಮೈತ್ರಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.

ಬೃಹತ್​ ರ್ಯಾಲಿ

By

Published : Apr 19, 2019, 1:58 PM IST

ಮೈನಪುರಿ(ಯುಪಿ):ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್​ ಯಾದವ್​ ಬರೋಬ್ಬರಿ 24 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಇಂದು ಮೈನಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಪರವಾಗಿ ಮತಯಾಚನೆ ನಡೆಸಿ, ಬೃಹತ್​ ರ‍್ಯಾಲಿಯಲ್ಲಿ ಭಾಗಿಯಾದರು. ಈ ಮೂಲಕ ಬಿಎಸ್ಪಿ-ಎಸ್ಪಿ ಮೈತ್ರಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಬೃಹತ್​ ರ್ಯಾಲಿ

ಉತ್ತರಪ್ರದೇಶದ ಮೈನಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್​ ಯಾದವ್​ ಸ್ಪರ್ಧೆ ಮಾಡಿದ್ದು, ಅವರ ಪರವಾಗಿ ಮಾಯಾವತಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಮುಲಾಯಂ ಸಿಂಗ್​ ಇವತ್ತು ನಮ್ಮೊಂದಿಗೆ ಮಾಯಾವತಿ ಇದ್ದಾರೆ. ಅವರಿಗೆ ನಾವು ಹೆಚ್ಚಿನ ಗೌರವ ನೀಡುತ್ತೇವೆ. ಅವರು ಯಾವಾಗಲೂ ನಮಗೆ ಸಾಥ್​ ನೀಡಿದ್ದಾರೆ ಎಂದು ಹೇಳಿದ್ದರು.

ನರೇಂದ್ರ ಮೋದಿ ಸೋಲಿಸುವ ಉದ್ದೇಶದಿಂದ ನಾವು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅವರ ಹಾಗೇ ಕೇವಲ ನಾವು ಸುಳ್ಳು ಹೇಳುವ ಮನುಷ್ಯರಲ್ಲ ಎಂದು ಗುಡುಗಿದರು.

24 ವರ್ಷಗಳ ಹಿಂದೆ ಅಂದರೆ 1995ರಲ್ಲಿ ಮೈತ್ರಿ ಮಾಡಿಕೊಂಡಿದ್ದ ಈ ಎರಡು ಪಕ್ಷಗಳ ನಡುವೆ ವೈಮನಸ್ಸು ಉಂಟಾಗಿತ್ತು. ಎಸ್​​ಪಿಗೆ ನೀಡಿದ್ದ ಬೆಂಬಲವನ್ನ ಮಾಯಾವತಿ ವಾಪಸ್​ ಪಡೆದಿದ್ದರು. ಇದರಿಂದ ರೊಚ್ಚಿಗೆದ್ದ ಎಸ್​ಪಿ ಕಾರ್ಯಕರ್ತರು ಮಾಯಾವತಿಯ ವಿಧಾಸಭೆಯಲ್ಲಿದ್ದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅದಾದ ಬಳಿಕ ಇವರು ಮೈತ್ರಿ ಕೂಡ ಮುರಿದು ಬಿದ್ದಿತು. ಆ ಬಳಿಕ ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿರಲಿಲ್ಲ.

ABOUT THE AUTHOR

...view details