ಕರ್ನಾಟಕ

karnataka

ETV Bharat / briefs

40 ಕೋಟಿ ರೂ ಬಾಕಿ ಹಣಕ್ಕಾಗಿ ಅಮ್ರಪಾಲಿ ವಿರುದ್ಧ​ ಸುಪ್ರಿಂ ಕೋರ್ಟ್​ ಮೆಟ್ಟಿಲೇರಿದ ಧೋನಿ ​

ಬ್ರಾಂಡ್​ ಅಂಬಾಸಿಡರ್​ ಆಗಿದ್ದಕ್ಕೆ  ಕಂಪನಿಯಿಂದ ತಮಗೆ ಬರಬೇಕಿರುವ 40 ಕೋಟಿ ರೂಗಳಿಗಾಗಿ ಧೋನಿ ಅಮ್ರಪಾಲಿ ಕಂಪನಿ ವಿರುದ್ಧ ಸುಪ್ರಿಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

dhoni

By

Published : Apr 28, 2019, 9:31 AM IST

ನವದೆಹಲಿ:ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್ ಧೋನಿ ತಮಗೆ ಬರಬೇಕಿರುವ 40 ಕೋಟಿ ರೂ ಬ್ರಾಂಡ್​ ಅಂಬಾಸಿಡರ್​ ಹಣಕ್ಕಾಗಿ ಅಮ್ರಪಾಲಿ ಕಂಪನಿ ವಿರುದ್ಧ ಸುಪ್ರಿಂ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

2009ರಲ್ಲಿ ಅಮ್ರಪಾಲಿ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್​ ಆಗಿ ಆಯ್ಕೆಯಾಗಿದ್ದರು, ಈ ವೇಳೆ ಕಂಪನಿಯ 5 ಬೆಡ್​ರೂಮ್​ಗಳ ಪೆಂಟ್​ಹೌಸ್​ ಕೂಡ ಬುಕ್​ ಮಾಡಿದ್ದರು. ಆದರೆ ಅಮ್ರಪಾಲಿ ಸಂಸ್ಥೆ ಸದ್ಯ 46 ಸಾವಿರ ಗ್ರಾಹಕರಿಗೆ ವಂಚನೆ ಮಾಡಿದ ಆರೋಪ ಕೇಳಿ ಬಂದ ಹಿನ್ನಲೆ ಕಂಪನಿಯ ಜೊತೆಗಿದ್ದ ಒಪ್ಪಂದವನ್ನು ರದ್ದುಪಡಿಸಿಕೊಂಡಿದ್ದರು.

ಆದರೆ ಒಪ್ಪಂದ ರದ್ದುಪಡಿಸಿಕೊಂಡ ಧೋನಿ ಅಂದು ಕಂಪನಿ ಲಾಸ್​ನಲ್ಲಿದ್ದ ಕಾರಣ ತಮಗೆ ಬರಬೇಕಿದ್ದ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಇದೀಗ ಕಂಪನಿಯ ಬ್ರಾಂಡ್​ ಅಂಬಾಸಿಡರ್​ ಆಗಿದ್ದಕ್ಕೆ ಕಂಪನಿಯಿಂದ ತಮಗೆ ಬರಬೇಕಿರುವ 40 ಕೋಟಿ ರೂಗಳಿಗಾಗಿ ಧೋನಿ ಅಮ್ರಪಾಲಿ ಕಂಪನಿ ವಿರುದ್ಧ ಸುಪ್ರಿಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಘಟನೆ ಹಿನ್ನಲೆ:

ನೊಯ್ಡಾದಲ್ಲಿ ಆಮ್ರಪಾಲಿ ಗ್ರೂಪ್​ ಸಫೈರ್ ಯೋಜನೆಯಡಿ ಅಪಾರ್ಟ್​ಮೆಂಟ್​ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. 46 ಸಾವಿರ ಫ್ಲಾಟ್​ಗಳನ್ನು ಆಗಾಗಲೇ ಜನರು ಬುಕ್​ ಸಹ ಮಾಡಿದ್ದರು. ಆದರೆ ಆ ಅಪಾರ್ಟ್ಮೆಂಟ್​ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾದ್ದರಿಂದ ಫ್ಲಾಟ್​ಗಳನ್ನು ಬುಕ್​ ಮಾಡಿದ್ದ ಮಂದಿ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ರಾಯಭಾರತ್ವವನ್ನು ತ್ಯಜಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ಟರ್​ ಮೂಲಕ ಆಕ್ರೋಶ ವ್ಯಕ್ತಪಡಿಸಿ ಧೋನಿಗೆ ಟ್ಯಾಗ್​ ಸಹ ಮಾಡಿದ್ದರು.

ಇಷ್ಟೆಲ್ಲಾ ಸಮಸ್ಯೆ ಕಂಡುಬಂದ ಮೇಲೆ ಧೋನಿ ರಿಯಲ್​ ಎಸ್ಟೇಟ್​ ಕಂಪನಿಯೊಂದಿಗಿನ ಬ್ರಾಂಡ್​ ಅಂಬಾಸಿಡರ್​ ಒಪ್ಪಂದದಿಂದ ಹಾಗೂ ಅದೇ ಸಂಸ್ಥೇಯ ಚಾರಿಟೇಬಲ್​ ಟ್ರಸ್ಟ್​ನಲ್ಲಿ ನಿರ್ದೇಶಕರಾಗಿದ್ದ ಪತ್ನಿ ಸಾಕ್ಷಿ ಸಿಂಗ್​ ಕೂಡ ರಾಜಿನಾಮೆ ನೀಡಿದ್ದರು. ಇದೀಗ ತಮಗೆ ಬರಬೇಕಿರುವ 40 ಕೋಟಿರೂ ಹಣಕ್ಕಾಗಿ ಧೋನಿ ಸುಪ್ರಿಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್​ ಕಂಪನಿಯ ಸಿಎಂಡಿ ಅನಿಲ್​ ಶರ್ಮ ಹಾಗೂ ಇಬ್ಬರು ನಿರ್ದೇಶಕರನ್ನು ಕ್ರಿಮಿನಲ್​ ದೂರಿನಡಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತ್ತು. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸೂಚನೆ ನೀಡಿದೆ.

ABOUT THE AUTHOR

...view details