ಕರ್ನಾಟಕ

karnataka

ETV Bharat / briefs

ಭಾರತ-ಪಾಕಿಸ್ತಾನ ಗಡಿಯಲ್ಲೂ ಈ ರೀತಿ ತಡೆ ಇರಲ್ವೇನೊ.... ಸಂಸದೆ ಸುಮಲತಾ - mandya latest news

ಸ್ಥಳೀಯರ ಮನವಿ ಮೇರೆಗೆ ಚೆನ್ನನ ಕೆರೆ, ಹಂಗರಹಳ್ಳಿಗಳಿಗೆ ನಾನು ಭೇಟಿ ನೀಡಿದ್ದೆ. ಅಲ್ಲಿನ ಜನರ ಗೋಳು ಕೇಳೋರಿಲ್ಲದಂತಾಗಿದೆ. ಸ್ಥಳೀಯರ ಕಷ್ಟ ಕೇಳಿ ನಾನು ಶಾಕ್​ ಆದೆ. ಅಲ್ಲಿನ ಅಕ್ರಮ ಗಣಿಗಾರಿಕೆಯಿಂದ ಯಾವ ರೀತಿ ತೊಂದರೆ ಆಗಿದೆ ಎಂದರೆ ಮನೆಗಳಲ್ಲಿ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಕಳವಳ ವ್ಯಕ್ತಪಡಿಸಿದ್ದಾರೆ.

 MP Sumalatha visit illegal mining place in mandya
MP Sumalatha visit illegal mining place in mandya

By

Published : Jul 7, 2021, 11:24 PM IST

Updated : Jul 8, 2021, 3:05 PM IST

ಮಂಡ್ಯ: ಈ ದಿನದ ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ. ಇಂತಹ ಸ್ಥಿತಿಯನ್ನು ನಾವು ಚಲನ‌ಚಿತ್ರಗಳಲ್ಲಿ ನೋಡಿದ್ದೆವು ಎಂದು ಸಂಸದೆ ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಗಣಿ ಪ್ರದೇಶಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು, ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಧ್ಯಮದ ಪ್ರತಿನಿಧಿಗಳು ಭೇಟಿ ನೀಡಿದಾಗ ಕಂಡಿದ್ದು ಭಯಾನಕವಾಗಿತ್ತು. ಭಾರತ-ಪಾಕಿಸ್ತಾನದ ಗಡಿಯಲ್ಲೂ ಈ ರೀತಿ ತಡೆ ಇರಲ್ವೇನೊ ಅಂತಹ ತಡೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ಥಳೀಯರ ಮನವಿ ಮೇರೆಗೆ ಚೆನ್ನನ ಕೆರೆ, ಹಂಗರಹಳ್ಳಿಗಳಿಗೆ ನಾನು ಭೇಟಿ ನೀಡಿದ್ದೆ. ಅಲ್ಲಿನ ಜನರ ಗೋಳು ಕೇಳೋರಿಲ್ಲದಂತಾಗಿದೆ. ಸ್ಥಳೀಯರ ಕಷ್ಟ ಕೇಳಿ ನಾನು ಶಾಕ್​ ಆದೆ. ಅಲ್ಲಿನ ಅಕ್ರಮ ಗಣಿಗಾರಿಕೆಯಿಂದ ಯಾವ ರೀತಿ ತೊಂದರೆ ಆಗಿದೆ ಎಂದರೆ ಮನೆಗಳಲ್ಲಿ ಬಿರುಕು ಬಿಟ್ಟಿದೆ ಎಂದು ಅಕ್ರಮ ಗಣಿಗಾರಿಕೆ ಮಾಲೀಕರ ವಿರುದ್ಧ ಕಿಡಿಕಾರಿದರು.

ಸಂಸದೆ ಸುಮಲತಾ

ಚೆನ್ನನಹಳ್ಳಿಯಲ್ಲಿನ ಜನರಿಗೆ ಉಸಿರಾಟದ ಸಮಸ್ಯೆಯಾಗಿದೆ..ಹಾರ್ಟ್ ಆಟ್ಯಾಕ್ ಆಗಿದೆ. ಹಂಗರಹಳ್ಳಿಯಲ್ಲಿ ದಿನಕ್ಕೆ 500 ಲಾರಿ ಸಂಚಾರ ಮಾಡುತ್ತಿವೆ. ಆದರೆ, ಇದರ ಬಗ್ಗೆ ಯಾರೂ ಕೇಳೋರಿಲ್ಲದಂತಾಗಿದೆ. ಸರ್ಕಾರಕ್ಕೆ ರಾಜಧನವನ್ನೂ ಕಟ್ಟದೆ ಯಾರು ಏನು ಮಾಡುತ್ತಾರೆ ಎಂಬ ಭಾವನೆ ಇದೆ ಎಂದರು.

ಸ್ಥಳೀಯ ಶಾಸಕರಿಗೆ ಪ್ರಶ್ನೆ:

ನೀವು ರಾಜಕೀಯದಲ್ಲೇ ಸಿನಿಮಾ ತೋರಿಸ್ತಿದ್ದೀರಾ. ಒಂದೇ ದಿನಕ್ಕೆ ನಾನು ಇಷ್ಟೊಂದು ಪ್ರಮಾಣದ ಅಕ್ರಮ ಕಂಡಿದ್ದೇನೆ. ಇದು ನಿಮಗೆ ಕಂಡಿಲ್ಲವೇ? ಇಷ್ಟೊಂದು ಅಕ್ರಮ ನಡೀತಾ ಇದ್ರೂ ಯಾಕೆ ಸುಮ್ಮನಿದ್ದೀರಿ? ಇದೆಲ್ಲಾ ನೀವು ಮಾಡಬೇಕಾದ ಕೆಲಸವಲ್ಲವೇ ಎಂದು ಗುಡುಗಿದರು.

ದೊಡ್ಡವರ ಹೆಸರಿನಲ್ಲಿ ಬೇನಾಮಿ ಅಕ್ರಮ ಗಣಿಗಾರಿಕೆ:

ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಡಿಸಿ ಎಲ್ಲರನ್ನೂ ಪ್ರಶ್ನೆ ಮಾಡಬೇಕಿದೆ. ನೀವು ಸರಿಯಾಗಿ ಕೆಲಸ ನಿರ್ವಹಿಸಿ ದಂಡ ವಿಧಿಸಿದ್ದೇ ಆದರೆ ಸಾವಿರ ಕೋಟಿಯಷ್ಟು ದಂಡ ವಸೂಲಿ ಮಾಡಬಹುದು ಎಂದರು.

ಗೂಂಡಾಗಳಿಂದ ಅಡ್ಡಿ:

ನಾವು ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೂಂಡಾಗಳು ಬಂದು ಅಡ್ಡಿ ಪಡಿಸಿದ್ರು. ಇದೆಲ್ಲಾ ನಿಮಗೆ ಕಾಣ್ತಿಲ್ವಾ? ಅಥವಾ ಇದನ್ನೆಲ್ಲಾ ನೀವೇ ಮಾಡ್ತಿದ್ದೀರಾ? ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದರಲ್ಲದೆ, ಇಂದಿನ‌ ಘಟನೆಗೆ ಸಂಬಂಧಿಸಿದಂತೆ ನೀವು ರಾಜೀನಾಮೆ ನೀಡಬೇಕು ಎಂದು ಸುಮಲತಾ ಆಗ್ರಹ ಮಾಡಿದರು.

Last Updated : Jul 8, 2021, 3:05 PM IST

ABOUT THE AUTHOR

...view details