ನವದೆಹಲಿ: ಕ್ರಿಕೆಟ್ ಕ್ಷೇತ್ರದಲ್ಲಿ ಹೆಸರು ಸಂಪಾದಿಸುವುದು ಪ್ರಸ್ತುತ ದಿನಗಳಲ್ಲಿ ತುಂಬಾ ಕಷ್ಟವಾದ ಕೆಲಸ ಎಂದು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಕ್ರಿಕೆಟ್ನಲ್ಲಿ ಹೆಸರು ಮಾಡುವುದು ಸುಲಭದ ಮಾತಲ್ಲ: ಸೆಹ್ವಾಗ್ - ಐಪಿಎಲ್
80, 90ರ ದಶಕದಲ್ಲಿ ಭಾರತ ತಂಡಕ್ಕೆ ಅಯ್ಕೆಯಾಗುತ್ತಿದ್ದವರೆಲ್ಲಾ ಮೆಟ್ರೋ ಸಿಟಿಯಿಂದ ಬಂದವರೇ ಆಗಿರುತ್ತಿದ್ದರು. ಆದರೆ ಇಂದು ಸಣ್ಣ ಸಣ್ಣ ಪಟ್ಟಣಗಳ ಯುವಕರು ಕ್ರಿಕೆಟ್ ಆಟವನ್ನ ವೃತ್ತಿಯಾಗಿಸಿಕೊಳ್ಳುತ್ತಿದ್ದಾರೆಂದು ಸೆಹ್ವಾಗ್ ಹೇಳಿದ್ದಾರೆ.
80, 90ರ ದಶಕದಲ್ಲಿ ಭಾರತ ತಂಡಕ್ಕೆ ಅಯ್ಕೆಯಾಗುತ್ತಿದ್ದವರೆಲ್ಲಾ ಮೆಟ್ರೋ ಸಿಟಿಯ ಆಟಗಾರರಾಗಿರುತ್ತಿದ್ದರು. ಆದರೆ ಇಂದು ಸಣ್ಣ ಸಣ್ಣ ಪಟ್ಟಣಗಳಿಂದಲೂ ಯುವಕರು ಕ್ರಿಕೆಟ್ ಆಟವನ್ನೇ ವೃತ್ತಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಕೆಟ್ನಲ್ಲಿ ಮೊದಲಿನ ಹಾಗೆ ಸುಲಭವಾಗಿ ಕ್ರಿಕೆಟಿಗರಾಗಿ ಪ್ರಸಿದ್ಧರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಒಬ್ಬ ಆಟಗಾರ ಐಪಿಎಲ್ನಂತಹ ದೊಡ್ಡ ಲೀಗ್ಗಳಲ್ಲಿ ನಿರಂತರವಾಗಿ ತನ್ನ ಪ್ರದರ್ಶನವನ್ನು ಕಾಯ್ದುಕೊಂಡರೆ ಮಾತ್ರ ಆತ ಭವಿಷ್ಯದಲ್ಲಿ 10-12 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಉಳಿಯಬಹುದು. ಜೊತೆಗೆ ಹಣವನ್ನು ಸಂಪಾದಿಸಬಹುದು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತುಂಬಾ ಪೈಪೋಟಿ ಎದುರಿಸಬೇಕಾಗುತ್ತದೆ ಎಂದು ಸ್ಫೋಟಕ ಆಟಗಾರ ಸೆಹ್ವಾಗ್ ಹೇಳಿದ್ದಾರೆ.