ಕರ್ನಾಟಕ

karnataka

ETV Bharat / briefs

ಒಂದಲ್ಲ, ಎರಡಲ್ಲ ಎಲ್ಲ ವಿಷಯಗಳಲ್ಲಿ 35 ಅಂಕ...10ನೇ ತರಗತಿ ವಿದ್ಯಾರ್ಥಿನಿಯ ಹೀಗೊಂದು ಸಾಧನೆ!

ಪರೀಕ್ಷೆ ಬರೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಒಂದೊಂದು ವಿಷಯದಲ್ಲಿ ವಿಭಿನ್ನವಾಗಿ ಅಂಕ ಪಡೆದುಕೊಳ್ಳುವುದು ಕಾಮನ್​. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿನಿ ಎಲ್ಲ ವಿಷಯಗಳಲ್ಲೂ ಕ್ರಮವಾಗಿ 35 ಅಂಕ ಪಡೆದುಕೊಂಡಿರುವ ಅಪರೂಪದ ಘಟನೆ ನಡೆದಿದೆ.

ಸಾಕ್ಷಿ ರಜಪೂತ್​

By

Published : Jun 10, 2019, 6:05 PM IST

Updated : Jun 10, 2019, 9:43 PM IST

ಸಾಂಗ್ಲಿ(ಮಹಾರಾಷ್ಟ್ರ): ಮಹಾರಾಷ್ಟ್ರದ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಒಬ್ಬಳು ಎಲ್ಲ ವಿಷಯಗಳಲ್ಲೂ 100ಕ್ಕೆ 35 ಅಂಕ ಪಡೆದುಕೊಂಡು ಅಪರೂಪವಾಗಿ ಪಾಸ್​ ಆಗಿರುವ ಘಟನೆ ನಡೆದಿದೆ.

ಸಾಕ್ಷಿ ರಜಪೂತ್​ ಮಹಾರಾಷ್ಟ್ರದ ಸಾಂಗ್ಲಿಯವಳಾಗಿದ್ದು, ಎಲ್ಲ ವಿಷಯಗಳಲ್ಲಿ 35 ಅಂಕ ಪಡೆದುಕೊಂಡಿದ್ದಾಳೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಕೆ, ಪ್ರತಿಯೊಂದು ವಿಷಯದಲ್ಲೂ ಮ್ಯಾಜಿಕ್​ ನಂಬರ್​ ಪಡೆದುಕೊಂಡು ಪಾಸ್​​ ಆಗಿರುವುದು ಆಶ್ಚರ್ಯ ನೀಡಿದೆ. ಹೊಸ ಪಠ್ಯಕ್ರಮ ತುಂಬಾ ಕಠಿಣವಾಗಿದ್ದರಿಂದ ಪರೀಕ್ಷೆ ಸರಿಯಾಗಿ ಬರೆಯಲು ಆಗಿರಲಿಲ್ಲ. ಆದರೆ ಪಾಸ್​ ಆಗಿರುವುದು ಖುಷಿ ನೀಡಿದೆ ಎಂದಿದ್ದಾಳೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಸರಿಯಾಗಿ ಅಧ್ಯಯನ ಮಾಡಿ, ಉತ್ತಮ ಅಂಕ ಪಡೆದುಕೊಳ್ಳುವ ಪ್ರಯತ್ನ ಮಾಡುವೆ ಎಂದಿದ್ದಾಳೆ. ಇನ್ನು ಈ ವಿದ್ಯಾರ್ಥಿನಿ ಎಲ್ಲ ವಿಷಯಗಳಲ್ಲೂ 35 ಅಂಕ ಪಡೆದುಕೊಳ್ಳುತ್ತಿದ್ದಂತೆ ವಿವಿಧ ಮಾಧ್ಯಮಗಳು ಈಕೆಯ ಸಂದರ್ಶನ ಸಹ ನಡೆಸಿವೆ ಎಂದು ತಿಳಿದು ಬಂದಿದೆ.

Last Updated : Jun 10, 2019, 9:43 PM IST

ABOUT THE AUTHOR

...view details