ಚೆನ್ನೈ:ನಾಥೂರಾಮ್ ಗೋಡ್ಸೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ಮಕ್ಕಳ್ ನೀದಿ ಮೈಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ಗೆ ಮಧುರೈ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿವಾದಾತ್ಮಕ ಹೇಳಿಕೆ ವಿಚಾರ... ಕಮಲ್ ಹಾಸನ್ಗೆ ನಿರೀಕ್ಷಣಾ ಜಾಮೀನು ಮಂಜೂರು
ಅರವುಕುರುಚ್ಚಿ ಉಪಚುನಾವಣೆಯ ಪ್ರಚಾರದ ವೇಳೆ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎಂದು ಕಮಲ್ ಹಾಸನ್ ಹೇಳಿದ್ದರು. ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕಮಲ್ ಹಾಸನ್
ಅರವುಕುರುಚ್ಚಿ ಉಪಚುನಾವಣೆಯ ಪ್ರಚಾರದ ವೇಳೆ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎಂದು ಕಮಲ್ ಹಾಸನ್ ಹೇಳಿದ್ದರು. ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹೇಳಿಕೆ ಸಂಬಂಧ ಬಲಪಂಥೀಯರು ಅರವುಕುರುಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆಕ್ಷನ್ 153ಎ ಹಾಗೂ 295ಎ ಅಡಿಯಲ್ಲಿ ಕಮಲ್ ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಎರಡು ಪಂಗಡಗಳ ನಡುವೆ ಶತ್ರುತ್ವದ ಪ್ರಚೋದನೆ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
Last Updated : May 20, 2019, 12:43 PM IST