ಬೆಳಗಾವಿ: ಮತದಾನ ಮಾಡಲು ಬಂದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣಾ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ಬೆಳಗಾವಿಯ ವಿಜಯನಗರ ಮತಗಟ್ಟೆಯಲ್ಲಿ ನಡೆದಿದೆ.
ಮತಗಟ್ಟೆಯಲ್ಲೇ 'ಕೈ' ಪ್ರಚಾರ ನಡೆಸಿ, ಅಧಿಕಾರಿಗಳಿಗೆ ಆವಾಜ್ ಹಾಕಿ ಶಾಸಕಿ ಹೆಬ್ಬಾಳ್ಕರ್ ದರ್ಪ! - belagavi
ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಚಲಾವಣೆ ಮಾಡಲು ಮತದಾನ ಕೇಂದ್ರದ ಒಳಗೆ ಹೋಗುವ ಸಂದರ್ಭದಲ್ಲಿ, ಚುನಾವಣಾ ಅಧಿಕಾರಿಗಳೊಂದಿಗೆ ವಾಕ್ಸಮರ ನಡೆಸಿದ್ದಾರೆ.
laksmi
ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಚಲಾವಣೆ ಮಾಡಲು ಮತದಾನ ಕೇಂದ್ರದ ಒಳಗೆ ಹೋಗುವ ಸಂದರ್ಭದಲ್ಲಿ, ಚುನಾವಣಾ ಅಧಿಕಾರಿಗಳು ಒಬ್ಬರೆ ಹೋಗುವಂತೆ ಸೂಚಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕರ್ತವ್ಯನಿರತ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಲಕ್ಷ್ಮೀ ಹೆಬ್ಬಾಳ್ಕರ್ ಕಲವೇ ನಿಮಿಷಗಳ ಹಿಂದೆ ಮತದಾನ ಮಾಡಲು ಬರುತ್ತಿದ್ದ ಮತದಾರರಿಗೆ ಇದೊಂದು ಸಾರಿ ನನ್ನ ಮುಖ ನೋಡಿ ಕಾಂಗ್ರೆಸ್ಗೆ ಮತ ಹಾಕುವಂತೆ ಕೇಳಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು.