ನವದೆಹಲಿ: ಹ್ಯಾಟ್ರಿಕ್ ಜಯ ಸಾಧಿಸಿ ಪ್ಲೇ ಆಫ್ ಕನಸಿನಲ್ಲಿರುವ ಆರ್ಸಿಬಿ ಇಂದು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಎದರಿಸಲಿದೆ.
ಸತತ ಆರು ಸೋಲುಗಳ ನಂತರ ಗೆಲುವಿನ ಟ್ರ್ಯಾಕ್ಗೆ ಮರಳಿರುವ ಆರ್ಸಿಬಿ ಇಂದಿನ ಪಂದ್ಯ ಸೇರಿದಂತೆ ಉಳಿದಿರುವ 3 ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಕೊಹ್ಲಿ ತವರೂರಾದ ಡೆಲ್ಲಿಯಲ್ಲಿ ಈ ಪಂದ್ಯ ನಡೆಯುತ್ತಿದ್ದು ತವರಿನ ಜನರ ಮುಂದೆ ಕೊಹ್ಲಿ ಗೆಲುವಿನ ನಗೆ ಬೀರಲು ಸಿದ್ದವಾಗಿದ್ದಾರೆ.
ಆರ್ಸಿಬಿ ಮಧ್ಯಮ ಕ್ರಮಾಂಕದ ಆದಾರ ಸ್ಥಂಭವಾಗಿದ್ದ ಮೊಯಿನ್ ಅಲಿ ತಂಡದಿಂದ ನಿರ್ಗಮಿಸಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಅವರ ಜಾಗಕ್ಕೆ ಹೆಟ್ಮೈರ್ ಅಥವಾ ಗ್ರ್ಯಾಂಡ್ಹೋಮ್ ಆಡುವ ಸಾಧ್ಯತೆ ಇದೆ. ಎಬಿಡಿ,ಪಾರ್ಥೀವ್ ಪಟೇಲ್ ಅಸ್ಭುತ ಫಾರ್ಮ್ನಲ್ಲಿದ್ದು, ಕೊಹ್ಲಿ ಇವರ ಜೊತೆಗೂಡಿದರೆ ಗೆಲುವು ಕಷ್ಟವೇನಲ್ಲ.
ಇನ್ನು ಬೌಲಿಂಗ್ನಲ್ಲಿ ಉಮೇಶ್ ಯಾದವ್,ಸೈನಿ ಸೌಥಿ,ಚಹಾಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ನೇಗಿ ಬದಲು ತಂಡ ಸೇರಿದ್ದ ವಾಷಿಂಗ್ಟನ್ ಸುಂದರ್ ಮಾತ್ರ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದು, ಇವರಿಗೆ ಕೊಹ್ಲಿ ಮತ್ತೊಂದು ಅವಕಾಶ ನೀಡುವರೆ ಎಂದು ಕಾದು ನೋಡಬೇಕಿದೆ.
ಇನ್ನು ಡೆಲ್ಲಿ ತಂಡದಲ್ಲಿ ಶಾ,ಶ್ರೇಯಸ್ ಅಯ್ಯರ್,ಪಂತ್ ಹಾಗೂ ಡೆಲ್ಲಿಯವರೇ ಆದ ಧವನ್ ತಂಡಕ್ಕೆ ಬಲ ತುಂಬಲಿದ್ದಾರೆ. ಇವರ ಜೊತೆಗೆ ಇಂಗ್ರಾಮ್,ಅಕ್ಷರ್ ಪಟೇಲ್,ರುದರ್ಫರ್ಡ್ ಆಲ್ರೌಂಡರ್ ಪ್ರದರ್ಶನ ಹಾಗೂ ರಬಡಾ, ಮೋರಿಸ್,ಲಾಮಿಚ್ಛಾನೆ,ಇಶಾಂತ್ ಕೂಡ ತಂಡದಲ್ಲಿ ತಂಡದಲ್ಲಿರುವುದು ಆರ್ಸಿಬಿಗೆ ಕಠಿಣ ಪೈಪೋಟಿ ನೀಡಲಿದ್ದಾರೆ.