ಬೆಂಗಳೂರು:ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡರ ನಿಧನಕ್ಕೆ ಸಿನಿಮಾ ಲೋಕ ಕಂಬನಿ ಮಿಡಿದಿದೆ.
'ಕಾಡು' ನೆನಪಿಸಿದ ಬಹುರೂಪಿ ಸಂಸ್ಕಾರ ಕಾರ್ನಾಡ್‌ರದು.. ಅವರು 'ಒಂದಾನೊಂದು ಕಾಲದಲ್ಲಿ' ಹಯವದನ..
ಬೆಂಗಳೂರು:ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡರ ನಿಧನಕ್ಕೆ ಸಿನಿಮಾ ಲೋಕ ಕಂಬನಿ ಮಿಡಿದಿದೆ.
'ಕಾಡು' ನೆನಪಿಸಿದ ಬಹುರೂಪಿ ಸಂಸ್ಕಾರ ಕಾರ್ನಾಡ್‌ರದು.. ಅವರು 'ಒಂದಾನೊಂದು ಕಾಲದಲ್ಲಿ' ಹಯವದನ..
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಖ್ಯಾತ ನಟ, ನಿರ್ದೇಶಕ ಕಮಲ್ ಹಾಸನ್, ಗಿರೀಶ್ ಕಾರ್ನಾಡ್ ಅವರ ಕಥೆಗಳು ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಿತ್ತು ಎಂದಿದ್ದಾರೆ.
ಕಾರ್ನಾಡ್ರಿಂದ ಹಲವರು ಪ್ರಭಾವಿತರಾಗಿದ್ದಾರೆ. ಅಭಿಮಾನಿ ಸಮೂಹ ಹಾಗೂ ಬರಹಗಾರರನ್ನು ಅಗಲಿದ್ದಾರೆ. ಅವರ ಶ್ರೇಷ್ಠ ಕೃತಿಗಳು ಬಹುಶಃ ಅವರ ಅಗಲಿಕೆಯ ನೋವನ್ನು ಭಾಗಶಃ ತುಂಬಬಲ್ಲದು ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಇನ್ನು ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್, ಕೆ ಎಂ ಚೈತನ್ಯ, ಸಿಂಪಲ್ ಸುನಿ, ತರುಣ್ ಸುಧೀರ್, ಹೆಬ್ಬುಲಿ ಕೃಷ್ಣ ಮಾತ್ರವಲ್ಲದೇ ತೆಲುಗಿನ ಜನಪ್ರಿಯ ನಟ ರಾಣಾ ದಗ್ಗುಬಾಟಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.