ಮುಂಬೈ: ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಕರೆಯಿಸಿಕೊಳ್ಳುವ ಐಪಿಎಲ್ ಶುರುವಾದರೆ ಸಾಕು, ಇಡೀ ವಿಶ್ವ ಕ್ರಿಕೆಟ್ 2 ತಿಂಗಳ ಕಾಲ ಸ್ತಬ್ಧವಾಗಿ ಬಿಡುತ್ತದೆ. ಈ ಎರಡು ತಿಂಗಳು ಕ್ರಿಕೆಟ್ ಪ್ರಿಯರಿಗೆ ಹಬ್ಬದಂತೆ ಬಾಸವಾಗುತ್ತದೆ ಎಂದರೆ ತಪ್ಪಾಗಲಾರದು.
2008ರಲ್ಲಿ ಶುರುವಾದ ಐಪಿಎಲ್ ಚುಟುಕು ಕ್ರಿಕೆಟ್ನಲ್ಲಿ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿತ್ತು. ಸ್ಟಿವ್ ಸ್ಮಿತ್, ಡೇವಿಡ್ ವಾರ್ನರ್, ಶಾನ್ ಮಾರ್ಷ್ರಂತಹ ಆಸೀಸ್ ಆಟಗಾರರು, ಭಾರತದ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಮನಿಷ್ ಪಾಂಡೆ, ಕೃನಾಲ್ ಪಾಂಡೆ ಅವರಂತಹ ಪ್ರತಿಭೆಗಳ ಅನಾವರಣ ಮಾಡಿದ ಐಪಿಎಲ್ ವಿವಾದಗಳಿಗೇನು ಕಡಿಮೆಯಿಲ್ಲ. ಪ್ರತಿಯೊಂದು ವರ್ಷವೂ ಈ ಐಶಾರಾಮಿ ಕ್ರಿಕೆಟ್ ಲೀಗ್ನಲ್ಲಿ ಒಂದಿಲ್ಲೊಂದು ವಿವಾದ ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
ಶ್ರೀಶಾಂತ್ಗೆ ಕಪಾಳ ಮೋಕ್ಷ ಮಾಡಿದ್ದ ಭಜ್ಜಿ (2008 )
2008 ರಲ್ಲಿ ನಡೆದ ಚೊಚ್ಚಲ ಐಪಿಎಲ್ನಲ್ಲಿ ಪಂಜಾಬ್ ತಂಡದ ಬೌಲರ್ ಆಗಿದ್ದ ಶ್ರೀಶಾಂತ್ ಮುಂಬೈ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿ ಮುಂಬೈನ ನಾಯಕ ಹರಭಜನ್ ಸಿಂಗ್ರನ್ನು ನೋಡಿ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಭಜ್ಜಿ , ಕೋಪದಿಂದ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದರು. ಈ ಘಟನೆ ಖಂಡಿಸಿದ ಬಿಸಿಸಿಐ ಭಜ್ಜಿಗೆ 11 ಐಪಿಎಲ್ ಹಾಗೂ 5 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಶ್ರೀಶಾಂತ್ಗೆ 2 ಪಂದ್ಯ ನಿಷೇಧ ಹೇರಿತ್ತು.
ಪಾಕ್ ಆಟಗಾರರ ನಿಷೇಧ (2009)
2008 ನವೆಂಬರ್ 26 ರಂದು ಪಾಕಿಸ್ತಾನದ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಮುಂಬೈನ ಹಲವು ಕಡೆ ದಾಳಿ ಮಾಡಿ 160ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದರು. ಹೀಗಾಗಿ 2009 ರ ಐಪಿಎಲ್ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಆಡಿಸದಿರಲು ಬಿಸಿಸಿಐ ನಿರ್ಧರಿಸಿತ್ತು.
ಲಲಿತ್ ಮೋದಿ ಅವ್ಯವಹಾರ(2010)
ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಲೀಗ್ ಪ್ರಸಾರದ ಹಕ್ಕಿನಲ್ಲಿ ಅವ್ಯವಹಾರ, ಪ್ರಾಂಚೈಸಿಗಳಲ್ಲಿ ರಹಸ್ಯ ಷೇರುಗಳನ್ನು ಹೊಂದಿರುವ ಆರೋಪ, ಹಲವು ಪ್ರಾಂಚೈಸಿಗಳಲ್ಲಿ ಸಂಬಂಧಿಕರಿಂದ ಹಣ ಹೂಡಿಕೆ ಮಾಡಿರುವ ಆರೋಪ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಐಪಿಎಲ್ನಿಂದ ನಿಷೇಧ ಹೇರಲಾಯಿತು.
ಚಿಯರ್ ಲೀಡರ್ ಡೈರಿ ಪ್ರಕರಣ (2011)
ಮುಂಬೈ ಇಂಡಿಯನ್ಸ್ ತಂಡದ ಪರ ಚಿಯರ್ ಮಾಡುತ್ತಿದ್ದ ಚಿಯರ್ ಲೀಡರ್ ಗುಂಪಿನ ಮಿಸ್ ಪಾಸ್ಕ್ವಲೊಟ್ಟೊ ತನ್ನ ವೈಯಕ್ತಿಕ ಡೈರಿಯಲ್ಲಿ ಭಾರತೀಯ ಹಾಗೂ ಕೆಲವು ವಿದೇಶಿ ಆಟಗಾರರ ವರ್ತನೆ ಬಗ್ಗೆ ಕೀಳಾಗಿ ಬರೆದುಕೊಂಡಿದ್ದ ಲೇಖನವನ್ನು ತನ್ನ ಬ್ಲಾಗ್ನಲ್ಲಿ ಶೇರ್ ಮಾಡಿದ್ದರು. ಈ ಘಟನೆಯಿಂದ ಆಕೆಯನ್ನು ಐಪಿಎಲ್ನಿಂದ ನಿಷೇಧಿಸಲಾಗಿತ್ತು.
ಶಾರುಕ್ಗೆ ವಾಂಖೆಡೆಯಿಂದ ನಿಷೇಧ (2012)
ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಕೋಲ್ಕತ್ತಾ ನೈಟ್ರೈಡರ್ಸ್ನ ಮಾಲಿಕ ಶಾರುಖ್‌ಖಾನ್‌ಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಸ್ವತಃ ಬಿಸಿಸಿಐ ಮನವಿ ಮಾಡಿದರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿಷೇಧ ತೆರವುಗೊಳಿಸುವದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಆರೋಪ (2013)
2013ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್ ಸೇರಿ ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್ ಮೇಲೆ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದ ಮೇಲೆ ಶ್ರೀಶಾಂತ್ಗೆ ಬಿಸಿಸಿಐ ಅಜೀವ ಕ್ರಿಕೆಟ್ ನಿಷೇಧ ಹೇರಿತ್ತು. ಪ್ರಕರಣ ಕುಲಾಸೆಯಾದರು ಇನ್ನು ಶ್ರೀಶಾಂತ್ಗೆ ಕ್ರಿಕೆಟ್ ಆಡಲು ಬಿಸಿಸಿಐ ಸಮ್ಮತಿಸಿಲ್ಲ.
ಪ್ರೀತಿ ಜಿಂಟಾ-ನೆಸ್ ವಾಡಿಯಾ ವಿವಾದ(2014)