ಚೆನ್ನೈ: ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ.
12 ನೇ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು 4 ಪಂದ್ಯಗಳಲ್ಲಿ ಸೋಲನುಭವಿಸಿರುವ ಎರಡು ತಂಡಗಳಿಗೂ ಈ ಪಂದ್ಯ ಪಲಿತಾಂಶದಿಂದ ಯಾವುದೇ ತೊಂದರೆಯಿಲ್ಲ. ಆದರೆ ಮೊದಲೆರಡು ಸ್ಥಾನ ಪಡೆದವರಿಗೆ ಮೊದಲ ಕ್ವಾಲಿಫೈರ್ನಲ್ಲಿ ಸೋತರು ಎರಡನೇ ಕ್ವಾಲಿಫೈರ್ನಲ್ಲಿ ಪಾಲ್ಗೊಳ್ಳುವ ಅವಕಾಶವಿರುದರಿಂದ ಈ ಪಂದ್ಯ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬದ್ರಪಡಿಸಿಕೊಳ್ಳಲು ಈ ಪಂದ್ಯ ಮಹತ್ವ ಪಡೆದುಕೊಂಡಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ಧೋನಿ ಈ ಪಂದ್ಯದಲ್ಲೂ ಕಳೆದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತವರಿನಲ್ಲೇ ಮುಗ್ಗರಿಸಿರುವ ಸಿಎಸ್ಕೆ ಇಂದು ಡೆಲ್ಲಿ ವಿರುದ್ಧ ಗೆದ್ದ ಅಗ್ರಸ್ಥಾನಕ್ಕೇರುವ ಆಲೋಚನೆಯಲ್ಲಿದೆ. ಇತ್ತ ಡೆಲ್ಲಿ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಆಲೋಚನೆಯಲ್ಲಿದೆ.
ಡೆಲ್ಲಿ ಕ್ಯಾಪಿಟಲ್: