ಕರ್ನಾಟಕ

karnataka

ETV Bharat / briefs

ಐಪಿಎಲ್​​ನಲ್ಲಿ ಇಲ್ಲಿವರೆಗೂ ಉರುಳಿದ್ದು 560 ವಿಕೆಟ್​! ಸ್ಪಿನ್ನರ್ಸ್​ ಹಿಂದಿಕ್ಕಿದ ಸೀಮರ್ಸ್‌

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವೇಗದ ಬೌಲರ್ಸ್​ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ವೇಗದ ಬೌಲರ್ಸ್​​

By

Published : May 3, 2019, 1:28 PM IST

ನವದೆಹಲಿ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಇಲ್ಲಿಯವರೆಗೆ 51 ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳಿಂದ ಬರೋಬ್ಬರಿ 566 ವಿಕೆಟ್​ ಉರುಳಿವೆ. ವಿಶೇಷವೆಂದರೆ, ಈ ಸಲದ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದುಕೊಂಡಿರುವುದು ವೇಗದ ಬೌಲರ್ಸ್​ ಎಂಬುದು ಗಮನಾರ್ಹ ಸಂಗತಿ.

ಎಲ್ಲ ಪಂದ್ಯಗಳಿಂದ ಸುಮಾರು 47 ವೇಗದ ಬೌಲರ್ಸ್‌ 315 ವಿಕೆಟ್​ ಪಡೆದುಕೊಂಡಿದ್ದಾರೆ. ಉಳಿದಂತೆ 36 ಸ್ಪಿನ್ನರ್ಸ್​​ 222 ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ 23 ಬ್ಯಾಟ್ಸ್​ಮನ್​ಗಳು ರನೌಟ್​ ಬಲೆಗೆ ಸಿಲುಕಿದ್ದಾರೆ. ವಿಶೇಷವೆಂದರೆ, ಡೆಲ್ಲಿ ತಂಡದ ವೇಗದ ಬೌಲರ್ಸ್​ 55 ವಿಕೆಟ್​ ಪಡೆದುಕೊಂಡಿದ್ದಾರೆ.

ವಿವಿಧ ತಂಡ ಪಡೆದ ವಿಕೆಟ್​ ಲೆಕ್ಕಾಚಾರ (ವೇಗದ ಬೌಲರ್ಸ್​)

ತಂಡ ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್​ ​​55
ಮುಂಬೈ ಇಂಡಿಯನ್ಸ್​ 53
ರಾಜಸ್ಥಾನ ರಾಯಲ್ಸ್ 43
ಕಿಂಗ್ಸ್​ ಇಲೆವೆನ್​ ಪಂಜಾಬ್​ 38
ಚೆನ್ನೈ ಸೂಪರ್​ ಕಿಂಗ್ಸ್ 36
ರಾಯಲ್​ ಚಾಲೆಂಜರ್ಸ್ ಬೆಂಗಳೂರು 31
ಕೋಲ್ಕತ್ತಾ ನೈಟ್​ ರೈಡರ್ಸ್ 16
ಸನ್​ರೈಸರ್ಸ್​ ಹೈದರಾಬಾದ್ 42

ಡೆಲ್ಲಿ ತಂಡದ ವೇಗದ ಬೌಲರ್​ ಕಾಂಗಿಸೊ ರಬಾಡಾ 25ವಿಕೆಟ್​ ಪಡೆದುಕೊಂಡಿದ್ದು, ರಾಜಸ್ಥಾನದ ಜೋಪ್ರಾ ಆರ್ಚರ್​ 11ವಿಕೆಟ್​ ಪಡೆದುಕೊಂಡಿದ್ದಾರೆ.

ವಿವಿಧ ತಂಡ ಪಡೆದ ವಿಕೆಟ್​ ಲೆಕ್ಕಾಚಾರ (ಸ್ಪಿನ್ನರ್ಸ್​​)

ತಂಡ ವಿಕೆಟ್​​​
ಡೆಲ್ಲಿ ಕ್ಯಾಪಿಟಲ್ಸ್​ 27
ಮುಂಬೈ ಇಂಡಿಯನ್ಸ್ 22
ರಾಜಸ್ಥಾನ ರಾಯಲ್ಸ್ 22
ಕಿಂಗ್ಸ್​ ಇಲೆವೆನ್​ ಪಂಜಾಬ್ 23
ಚೆನ್ನೈ ಸೂಪರ್​ ಕಿಂಗ್ಸ್ 48
ರಾಯಲ್​ ಚಾಲೆಂಜರ್ಸ್ ಬೆಂಗಳೂರು 27
ಕೋಲ್ಕತ್ತಾ ನೈಟ್​ ರೈಡರ್ಸ್ 26
ಸನ್​ರೈಸರ್ಸ್​ ಹೈದರಾಬಾದ್ 28

ವಿಶೇಷವೆಂದರೆ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸ್ಪಿನ್ನರ್ಸ್​ ರವೀಂದ್ರ ಜಡೇಜಾ,ಇಮ್ರಾನ್​ ತಾಹೀರ್, ಹರ್ಭಜನ್​ ಸಿಂಗ್​​ ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಚೆನ್ನೈ ಸ್ಪಿನ್​ ವಿಭಾಗದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದುಕೊಂಡಿದೆ.ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಇಮ್ರಾನ್​ ತಾಹೀರ್​ 21ವಿಕೆಟ್​,ಶ್ರೇಯಸ್​ ಗೋಪಾಲ್​ 18ವಿಕೆಟ್​,ಯಜುವೇಂದ್ರ ಚಹಾಲ್​ 17ವಿಕೆಟ್​ ಪಡೆದುಕೊಂಡಿದ್ದಾರೆ.ಉಳಿದಂತೆ ದೀಪಕ್​ ಚಹರ್​(ಸಿಎಸ್​ಕೆ)16 ವಿಕೆಟ್​, ಮೊಹಮ್ಮದ್​ ಶಮಿ(ಪಂಜಾಬ್​)16ವಿಕೆಟ್​,ಬೂಮ್ರಾ(ಮುಂಬೈ)15ವಿಕೆಟ್ ಪಡೆದುಕೊಂಡಿದ್ದಾರೆ.

ABOUT THE AUTHOR

...view details