ಕರ್ನಾಟಕ

karnataka

ETV Bharat / briefs

ಐಎನ್​ಎಸ್​​ ವಿರಾಟ್​​ ಪ್ರಧಾನಿ​ ಭದ್ರತೆಗಾಗಿ ನಿಯೋಜನೆಯಾಗಿತ್ತು: ಮೋದಿ ಆರೋಪಕ್ಕೆ ಮಾಜಿ ಅಧಿಕಾರಿ ಸ್ಪಷ್ಟನೆ - ಯುದ್ಧನೌಕೆ

ಲಕ್ಷದ್ವೀಪದಲ್ಲಿ ಐಎನ್​ಎಸ್ ವಿರಾಟ್ ಯುದ್ಧ ನೌಕೆಯನ್ನು ನಿಲ್ಲಿಸಲಾಗಿತ್ತೇ ವಿನಾ ಗಾಂಧಿ ಕುಟುಂಬ ಅದನ್ನು ರಜೆಯ ಮಜಕ್ಕಾಗಿ ಬಳಕೆ ಮಾಡಿರಲಿಲ್ಲ ಎಂದು ಮಾಜಿ ಅಧಿಕಾರಿ ವಜಾಬಹತ್ ಹಬೀಬುಲ್ಲಾ ಸ್ಪಷ್ಟನೆ ನೀಡಿದ್ದಾರೆ.

ಐಎನ್​ಎಸ್​ ವಿರಾಟ್

By

Published : May 9, 2019, 4:29 PM IST

ನವದೆಹಲಿ:ಐಎನ್​ಎಸ್​​ ವಿರಾಟ್​ ಯುದ್ಧ ನೌಕೆಯನ್ನು ರಾಜೀವ್ ಗಾಂಧಿ ತಮ್ಮ ರಜೆಯ ಮಜಾ ಅನುಭವಿಸಲು ಉಪಯೋಗಿಸಿದ್ದರು ಎನ್ನುವ ಪ್ರಧಾನಿ ಮೋದಿಯ ಆರೋಪಕ್ಕೆ ಲಕ್ಷದ್ವೀಪದಲ್ಲಿ ಕಾರ್ಯನಿರ್ವಹಿಸಿದ ಅಂದಿನ ಅಧಿಕಾರಿ ವಜಾಹತ್ ಹಬೀಬುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷದ್ವೀಪದಲ್ಲಿ ಐಎನ್​ಎಸ್ ವಿರಾಟ್ ಯುದ್ಧನೌಕೆಯನ್ನು ನಿಲ್ಲಿಸಲಾಗಿತ್ತೇ ವಿನಾ ಗಾಂಧಿ ಕುಟುಂಬ ಅದನ್ನು ರಜೆಯ ಮಜಕ್ಕಾಗಿ ಬಳಕೆ ಮಾಡಿರಲಿಲ್ಲ ಎಂದು ಮಾಜಿ ಅಧಿಕಾರಿ ವಜಾಬಹತ್ ಹಬೀಬುಲ್ಲಾ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ಓದಿಗಾಗಿ:

ರಜೆ ಮಜೆಗೆ ಐಎನ್​ಎಸ್​ ಬಳಕೆ ಆಗ್ತಿತ್ತು.. ಮತ್ತೆ ಗಾಂಧಿ ಕುಟುಂಬ ಟಾರ್ಗೆಟ್​ ಮಾಡಿದ ನಮೋ

ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಲಿಕಾಪ್ಟರ್​​ನಲ್ಲಿ ಲಕ್ಷದ್ವೀಪದಲ್ಲಿ ಬಂದಿಳಿದಿದ್ದರು. ಐಎನ್​ಎಸ್​ ವಿರಾಟ್ ಪ್ರಧಾನಿಯವರ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ಆ ವೇಳೆ ಭದ್ರತೆಗೆ ಯುದ್ಧನೌಕೆಯ ಹೊರತಾಗಿ ಬೇರೆ ಆಯ್ಕೆಗಳಿರಲಿಲ್ಲ ಎಂದು ಹಬೀಬುಲ್ಲಾ ಹೇಳಿದ್ದಾರೆ.

ಅಧಿಕೃತ ಮೀಟಿಂಗ್​ಗಾಗಿ ರಾಜೀವ್ ಗಾಂಧಿ ಲಕ್ಷದ್ವೀಪಕ್ಕೆ ಬಂದಿದ್ದರು. ಅತಿಥಿಗಳು ಬಂದ ವೇಳೆ ರಾಜೀವ್ ಗಾಂಧಿ ಐಎನ್​ಎಸ್ ವಿರಾಟ್​​ನಲ್ಲಿ ತಂಗಿದ್ದರು. ಆದರೆ ಯಾವುದೇ ವಿದೇಶಿಯರಿಗೆ ಅಥವಾ ಅತಿಥಿಗಳಿಗೆ ಯುದ್ಧನೌಕೆಯೊಳಗೆ ಪ್ರವೇಶಿಸಲು ಅನುಮತಿ ಇರಲಿಲ್ಲ ಎಂದು ಹಬೀಬುಲ್ಲಾ ತಿಳಿಸಿದ್ದಾರೆ.

ABOUT THE AUTHOR

...view details