ದುಬೈ:ಸೊಂಟದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಹಿಳೆಯೊಬ್ಬಳು ದುಬೈನಲ್ಲಿ ಮೃತಪಟ್ಟಿದ್ದಾಳೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.
42 ವರ್ಷದ ರಿಟಾ ಫರ್ನಾಂಡಿಸ್ ಸಾವನ್ನಪ್ಪಿರುವ ದುರ್ದೈವಿ. ಸೊಂಟದ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿ ಕೇವಲ ಎರಡು ಗಂಟೆಯಲ್ಲೇ ಮೃತಪಟ್ಟಿದ್ದಾಳೆ. ಹಿಪ್ ಬದಲಾವಣೆಗಾಗಿ ಆಕೆ ಅಲ್ಝಜರ್ ಆಸ್ಪತ್ರೆಗೆ ಮೇ 9ರಂದು ದಾಖಲಾಗಿದ್ದಳು. ಆದರೆ, ದಾಖಲಾದ ಎರಡೇ ಗಂಟೆಯಲ್ಲಿ ಮೃತಪಟ್ಟಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ ಎಂದು ತಿಳಿದು ಬಂದಿದೆ.