ನವದೆಹಲಿ:ಜಂಟಲ್ಮ್ಯಾನ್ ಗೇಮ್ನ ಅತಿದೊಡ್ಡ ಹಬ್ಬ ವಿಶ್ವಕಪ್ ಟೂರ್ನಿಗೆ ಇನ್ನೊಂದು ದಿನ ಬಾಕಿ ಇದ್ದು ಎಲ್ಲೆಡೆ ಕ್ರಿಕೆಟ್ ಜ್ವರ ಕಾವೇರುತ್ತಿದೆ.
ವಿಶ್ವಕಪ್ ನಡೆಯುವ ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದಿಂದ ಇಂಗ್ಲೆಂಡ್ಗೆ ತೆರಳುವವರ ಸಂಖ್ಯೆ ಶೇ.3ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಬುಕ್ಕಿಂಗ್ಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಹಾಗೂ ಅರ್ಧಶತಕಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಸ್ ಇವರು!
ವಿಶ್ವಕಪ್ನಲ್ಲಿ ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳ ಭಾಗವಹಿಸುತ್ತಿವೆ. ಸದ್ಯಕ್ಕೆ ಬಂದಿರುವ ವರದಿಯ ಪ್ರಕಾರ ಇಂಗ್ಲೆಂಡ್ ಫ್ಲೈಟ್ ಹತ್ತುವವರ ಸಾಲಿನಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ದೇಶಗಳಿವೆ.
ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಮೇ 30ರಿಂದ ಜುಲೈ 14ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಅಗ್ರ ಹತ್ತು ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಜೂನ್ 5ರಂದು ಟೀಮ್ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಈ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.