ನವದೆಹಲಿ:ಮಧ್ಯ ಪ್ರದೇಶ ಸಿಎಂ ಕಮಲ್ನಾಥ್ಗೆ ಸೇರಿರುವ ಸುಮಾರು 50 ವಿವಿಧ ಸ್ಥಳಗಳಲ್ಲಿ ಸುಮಾರು 200ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳ ಈ ದಾಳಿಯ ವೇಳೆ ಭದ್ರತೆಗಾಗಿ ಸಿಆರ್ಪಿಎಫ್ ಪಡೆ ಸಾಥ್ ನೀಡಿದೆ. ಮಧ್ಯಪ್ರದೇಶ ಸಿಎಂ ಕಮಲ್ನಾಥ್ರ ಆಪ್ತ ಅಧಿಕಾರಗಳ ಮನೆಗಳ ಸುತ್ತ ಸಿಆರ್ಪಿಎಫ್ ಯೋಧರು ಬಿಗಿ ಬಂದೋಬಸ್ತ್ ನೀಡಿದ್ದಾರೆ.