ಕರ್ನಾಟಕ

karnataka

ETV Bharat / briefs

ಅಕ್ರಮ ರಾಸುಗಳ ಸಾಗಾಣೆ: ವ್ಯಕ್ತಿಯ ಮೇಲೆ ಹಲ್ಲೆ - assult

ಧಾರವಾಡ ಹೊರವಲಯದ ನರೇಂದ್ರ ಗ್ರಾಮದಲ್ಲಿ ಹತ್ತಿರ ಅಕ್ರಮವಾಗಿ ರಾಸುಗಳ ಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ

By

Published : Jun 1, 2019, 9:41 PM IST

ಧಾರವಾಡ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಲಾರಿಗಳ ಮೇಲೆ ಕಲ್ಲು ತೂರಲಾಗಿದ್ದು,ಲಾರಿಯಲ್ಲಿದ್ದ ಸದ್ದಾಂ ಎನ್ನುವ ವ್ಯಕ್ತಿಗೆ ಮಾರಣಾಂತಿಕವಾಗಿ ಥಳಿಸಿದ ಘಟನೆ ಧಾರವಾಡ ಹೊರವಲಯ ನರೇಂದ್ರ ಗ್ರಾಮದ ಬಳಿ ನಡೆದಿದೆ.

ರಾಸುಗಳನ್ನು ತುಂಬಿರುವ ಲಾರಿ

ಬಾಗಲಕೋಟೆ ಮತ್ತು ಗೋವಾ ರಾಜ್ಯದ ನೋಂದಣಿ ಹೊಂದಿರುವ ಎರಡು ಕ್ಯಾಂಟರ್ ಲಾರಿಗಳಲ್ಲಿ 60ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸುದ್ದಿ ತಿಳಿದ ಗ್ರಾಮಸ್ಥರು ಲಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಧಾರವಾಡ ಡಿವೈಎಸ್ ಪಿ.ರಾಮನಗೌಡ ಹಟ್ಟಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಲಾರಿಯಲ್ಲಿದ್ದ ಓರ್ವನನ್ನು ಪೋಲಿಸರು ವಶಕ್ಕೆ ಪಡೆದಿದ್ದು. ಇನ್ನೊರ್ವ ವ್ಯಕ್ತಿ ಧಾರವಾಡ ಪೋಲಿಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ ಎನ್ನಲಾಗಿದೆ.

ಗ್ರಾಮಸ್ಥರಿಂದ ಥಳಿತಕ್ಕೊಳಗಾಗಿದ್ದ ಸದ್ದಾಂ ಎಂಬವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ABOUT THE AUTHOR

...view details