ಕೂಚಿ(ಜಾರ್ಖಂಡ್):ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡ ನಕ್ಸಲರು ಸುಧಾರಿತ ಸ್ಫೋಟಕಗಳಿಂದ ಹಿಂಸಾಚಾರ ನಡೆಸಿದ ಪರಿಣಾಮ 11 ಯೋಧರು ಗಾಯಗೊಂಡಿರುವ ಘಟನೆ ಇಲ್ಲಿನ ಕೂಚಿ ಪ್ರದೇಶದಲ್ಲಿ ನಡೆದಿದೆ.
ನಕ್ಸಲರ ಉಟಪಳ: IED ಸ್ಫೋಟದಿಂದ 11 ಸಿಬ್ಬಂದಿಗೆ ಗಾಯ,ಆಸ್ಪತ್ರೆಗೆ ದಾಖಲು
ಭದ್ರತಾ ಸಿಬ್ಬಂದಿ ಗುರಿಯಾಗಿಸಿ, ಸುಧಾರಿತ ಸ್ಫೋಟಕದಿಂದ ಬ್ಲಾಸ್ಟ್ ನಡೆಸಿದ್ದು(IED) 11 ಯೋಧರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಳಗ್ಗೆ 4.43 ರ ವೇಳೆ ಈ ಘಟನೆ ನಡೆದಿದ್ದು, 209 ಕೋಬ್ರಾ ಬ್ಯಾಚ್ನ 8 ಯೋಧರು ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದ ವೇಳೆ ನಕ್ಸಲರು ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಕಳೆದ ವಾರ ನಕ್ಸಲರ ಅಟ್ಟಹಾಸಕ್ಕೆ ಮೂವರು ಯೋಧರು ಸಾವನ್ನಪ್ಪಿದ್ದರು.