ಕರ್ನಾಟಕ

karnataka

ETV Bharat / briefs

ಕಿವೀಸ್ ತಂಡಕ್ಕೆ ಸುಲಭ ತುತ್ತಾದ ಆಫ್ಘನ್ನರು... ವಿಲಿಯಮ್ಸನ್​​ ಪಡೆಗೆ ಹ್ಯಾಟ್ರಿಕ್ ಗೆಲುವು..! - ಅಂಕಪಟ್ಟಿ

ಟೂರ್ನಿಯ ಮೂರೂ ಪಂದ್ಯಗಳನ್ನು ಜಯಿಸುವ ಮೂಲಕ ನ್ಯೂಜಿಲ್ಯಾಂಡ್ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಹ್ಯಾಟ್ರಿಕ್ ಗೆಲುವು

By

Published : Jun 9, 2019, 7:50 AM IST

ಟಾಂಟನ್​​:ವಿಶ್ವಕಪ್ ಟೂರ್ನಿಯ ಶನಿವಾರದ ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ ಆಫ್ಘಾನಿಸ್ತಾನವನ್ನು ಏಳು ವಿಕೆಟ್​​ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಆಫ್ಘನ್ನರು ಉತ್ತಮ ಆರಂಭವನ್ನೇ ಪಡೆದಿದ್ದರು. ಹಝ್ರತುಲ್ಲಾ ಝಝೈ 34 ರನ್ ಹಾಗೂ ನೈರ್​ ಅಲಿ ಝಡ್ರಾನ್​ 31 ರನ್ ಸಿಡಿಸುವ ಮೂಲಕ ಭರ್ಜರಿ ಆರಂಭದ ಸೂಚನೆ ನೀಡಿದ್ದರು. ಆ ಬಳಿಕ ಹಷ್ಮತುಲ್ಲಾ ಶಾಹಿದಿ 59 ರನ್ ಬಾರಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.

ನಾಯಕ ಗುಲ್ಬಾದಿನ್ ನೈಬ್ 4, ನಬಿ 9, ರಹಮತ್ ಶಾ ಶೂನ್ಯಕ್ಕೆ ಔಟಾಗಿ ಆಫ್ಘನ್​ ಪಾಳಯದಲ್ಲಿ ನಿರಾಸೆ ಮೂಡಿಸಿದರು. 41.1 ಓವರ್​ನಲ್ಲಿ ಆಫ್ಘಾನಿಸ್ತಾನ 172 ರನ್ನಿಗೆ ಆಲ್​ಔಟ್ ಆಯಿತು.

ತವರಲ್ಲಿ ಬಾಂಗ್ಲಾ ಮಣಿಸಿದ ಇಂಗ್ಲೆಂಡ್​ : 106 ರನ್​ಗಳ ಭರ್ಜರಿ ಗೆಲುವು

ಕಿವೀಸ್ ಪರ ಜಿಮ್ಮಿ ನೀಶಾಮ್​​ 5 ಹಾಗೂ ಲಾಕಿ ಫರ್ಗ್ಯೂಸನ್​ 4 ವಿಕೆಟ್ ಪಡೆದು ಆಫ್ಘಾನಿಸ್ತಾನದ ದೊಡ್ಡ ಮೊತ್ತದ ಕನಸಿಗೆ ಮುಳ್ಳಾದರು.ಸಾಧಾರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಆಟಗಾರ ಗಫ್ಟಿಲ್​ ಶೂನ್ಯಕ್ಕೆ ನಿರ್ಗಮಿಸಿದರು. ಕಾಲಿನ್ ಮನ್ರೋ 22 ರನ್ ಗಳಿಸಿ ಪೆವಿಲಿಯನ್ ಸೇರಿದರು.

ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್​​​​ ಆಕರ್ಷಕ 79 ರನ್​ ಬಾರಿಸಿ ತಂಡಕ್ಕೆ ಗೆಲುವನ್ನು ತಂದಿತ್ತರು. ನಾಯಕನಿಗೆ ಸಾಥ್ ನೀಡಿದ ರಾಸ್ ಟೇಲರ್​ 48 ರನ್​ ಗಳಿಸಿದರು. 32.1 ಓವರ್​ನಲ್ಲಿ ಕಿವೀಸ್ ಮೂರು ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತು.ಟೂರ್ನಿಯ ಮೂರೂ ಪಂದ್ಯಗಳನ್ನು ಜಯಿಸುವ ಮೂಲಕ ನ್ಯೂಜಿಲ್ಯಾಂಡ್ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ABOUT THE AUTHOR

...view details