ದುಬೈ:ಮೇ. 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಅಂಪೈರ್ ಹಾಗೂ ರೆಫರಿಗಳ ಪಟ್ಟಿ ರಿಲೀಸ್ ಮಾಡಿದ್ದು, ಇದರಲ್ಲಿ ಭಾರತದ ಏಕೈಕ ಅಂಪೈರ್ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತದಿಂದ ಸುಂದರಾಮ್ ರವಿ ಐಸಿಸಿ ವಿಶ್ವಕಪ್ನಲ್ಲಿ ಅಂಪೈರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈ-ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನೋ ಬಾಲ್ ನೀಡದೇ ಸುಂದರಾಮ್ ವಿವಾದಕ್ಕೆ ಒಳಗಾಗಿದ್ದರು. ಇವರ ವಿರುದ್ಧ ಕೊಹ್ಲಿ ಗರಂ ಕೂಡ ಆಗಿದ್ದರು.
ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ವಿಶ್ವಕಪ್ಗಾಗಿ ಒಟ್ಟು 48 ಪಂದ್ಯಗಳಿಗಾಗಿ 16 ಅಂಪೈರ್ ಹಾಗೂ ಆರು ಮಂದಿ ಮ್ಯಾಚ್ ರೆಫರಿಗಳು ಆಯ್ಕೆಗೊಂಡಿದ್ದಾರೆ. ಕುಮಾರ್ ಧರ್ಮಸೇನ್, ಪೌಲ್ ರಫೇಲ್, ಡೇವಿಡ್ ಬೂನ್ ಮಾಜಿ ವಿಶ್ವಕಪ್ ವಿನ್ನರ್ಸ್ಗಳಾಗಿದ್ದು, ಈ ಮೂವರು 1996, 1999 ಹಾಗೂ 1987ರಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದಲ್ಲಿದ್ದರು.