ನಾಟಿಂಗ್ಹ್ಯಾಮ್: ವಿಶ್ವಕಪ್ ಟೂರ್ನಿಯ ಪ್ರಥಮ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಇದೀಗ ದ್ವಿತೀಯ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ.
ಎಲ್ಲ ಆಟಗಾರರ ಸಾಂಘಿಕ ಆಟದ ಫಲವಾಗಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಿಗದಿತ 50 ಓವರ್ನಲ್ಲಿ ಸರ್ಫರಾಜ್ ಪಡೆ 8 ವಿಕೆಟ್ ನಷ್ಟಕ್ಕೆ 348 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
ಆರಂಭಿಕ ಆಟಗಾರರಾದ ಇಮಾಮ್ ಉಲ್ ಹಕ್ 44 ಹಾಗೂ ಫಕರ್ ಜಮಾನ್ 36 ರನ್ಗಳ ಕೊಡುಗೆ ನೀಡುವ ಮೂಲಕ ಉತ್ತಮ ಆರಂಭ ನೀಡಿದರು. ನಂತರ ಬಂದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ಹಫೀಜ್ ತಲಾ 63 ಮತ್ತು 84 ರನ್ ಸಿಡಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವ ಕಾರ್ಯ ಮಾಡಿದರು. ನಾಯಕ ಸರ್ಫರಾಜ್ ಅಹ್ಮದ್ ಆಕರ್ಷಕ 55 ರನ್ ಬಾರಿಸಿ ತಮ್ಮ ಜವಾಬ್ದಾರಿ ನಿಭಾಯಿಸಿದರು.
ಆಂಗ್ಲರ ಪರ ಮೊಯಿನ್ ಅಲಿ ಹಾಗೂ ಕ್ರಿಸ್ ವೋಕ್ಸ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಎರಡು ವಿಕೆಟ್ ಮಾರ್ಕ್ ವುಡ್ ಪಾಲಾಯಿತು.