ನವದೆಹಲಿ:ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಟೇಕಾಫ್ ಆದ ಕೆಲ ಹೊತ್ತಿನಲ್ಲಿ ಸಂಪರ್ಕ ಕಡಿದುಗೊಂಡು ನಾಪತ್ತೆಯಾಗಿದೆ.
ಟೇಕಾಫ್ ಆದ ಅರ್ಧ ಗಂಟೆಯಲ್ಲಿ ಐಎಎಫ್ ವಿಮಾನ ನಾಪತ್ತೆ..! - ಸಂಪರ್ಕ
ಅಸ್ಸೋಂನ ಜೋರ್ಹತ್ನಿಂದ ಇಂದು ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ ಅರುಣಾಚಲದ ಮೇಚುಕಾಗೆ ಹೊರಟಿತ್ತು. ಮಧ್ಯಾಹ್ನ ಒಂದು ಗಂಟೆ ಬಳಿಕ ಈ ವಿಮಾನ ಯಾವುದೇ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಸೇನಾ ವಿಮಾನ
ಅಸ್ಸೋಂನ ಜೋರ್ಹತ್ನಿಂದ ಇಂದು ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ ಅರುಣಾಚಲದ ಮೇಚುಕಾಗೆ ಹೊರಟಿತ್ತು. ಮಧ್ಯಾಹ್ನ ಒಂದು ಗಂಟೆ ಬಳಿಕ ಈ ವಿಮಾನ ಯಾವುದೇ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಎಂಟು ಸೇನಾ ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರು ಸೇರಿದಂತೆ ಒಟ್ಟು 13 ಮಂದಿ ಎಎನ್-32 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸದ್ಯ ಸುಖೋಯ್-30 ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.