ಕರ್ನಾಟಕ

karnataka

ETV Bharat / briefs

ವಿಶ್ವಕಪ್​ಗೆ ಆಯ್ಕೆಯಾಗದ ಆಟಗಾರರು ಆಘಾತಪಡುವ ಅಗತ್ಯವಿಲ್ಲ, ನಿಮಗಿನ್ನು ಅವಕಾಶವಿದೆ: ರವಿಶಾಸ್ತ್ರಿ - ವಿಶ್ವಕಪ್​

ಕ್ರಿಕೆಟ್​ ಒಂದು ಫನ್ನಿ ಗೇಮ್​, ಇಲ್ಲಿ ಯಾವಾಗ ಬೇಕಾದರು ಗಾಯಕ್ಕೊಳಗಾಗಬಹುದು, ಅಂತಹ ಸಂದರ್ಭದಲ್ಲಿ ಯಾರು ಆಯ್ಕೆಯಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೊ ಅಂತಹವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ರಾಯುಡು, ಪಂತ್​ಗೆ ಪರೋಕ್ಷವಾಗಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ss

By

Published : Apr 17, 2019, 10:22 PM IST

ಮುಂಬೈ: ವಿಶ್ವಕಪ್​ಗೆ ಆಯ್ಕೆಯಾಗದಿದ್ದಕ್ಕೆ ಬೇಸರಕ್ಕೊಳಗಾಗಿರುವ ಆಟಗಾರರಿಗೆ ಆಟಗಾರರಿಗೆ ಕೋಚ್​ ರವಿಶಾಸ್ತ್ರ ಸಮಾಧಾನ ಹೇಳಿದ್ದಾರೆ.

ಕ್ರಿಕೆಟ್​ ಒಂದು ಫನ್ನಿ ಗೇಮ್​, ಇಲ್ಲಿ ಯಾವಾಗ ಬೇಕಾದರು ಗಾಯಕ್ಕೊಳಗಾಗಬಹುದು, ಅಂತಹ ಸಂದರ್ಭದಲ್ಲಿ ಯಾರು ಆಯ್ಕೆಯಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೊ ಅಂತಹವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ರಾಯುಡು,ಪಂತ್​ಗೆ ಪರೋಕ್ಷವಾಗಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

16 ರ ತಂಡ ಇದ್ದರೆ ಉತ್ತಮ:

ವಿಶ್ವಕಪ್​ನಲ್ಲಿ 15 ಸದ್ಯಸರ ತಂಡಕ್ಕಿಂತ 16 ಸದಸ್ಯರ ತಂಡವಿದ್ದರೆ ಉತ್ತಮ. ಒಂದುವರೆ ತಿಂಗಳು ನಡೆಯುವ ಟೂರ್ನಿಯಲ್ಲಿ 15ಕ್ಕಿಂತ 16 ಆಟಗಾರರು ಇರಬೇಕಿತ್ತು. ನಾವು ಇದನ್ನು ಐಸಿಸಿಯ ಗಮನಕ್ಕು ತಂದಿದ್ದೆವು, ಆದರೆ ನಿಯಮದ ಪ್ರಕಾರ 15 ಆಟಗಾರರಿಗೆ ಮಾತ್ರ ಆಧ್ಯತೆ ಇರುವುದರಿಂದ ತಂಡದ ಆಯ್ಕೆ ತುಂಬಾ ಕಠಿಣವಾಗಿದೆ ಎಂದಿದ್ದಾರೆ.

ತಂಡದ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ:

ಈಗಾಗಲೆ ಆಯ್ಕೆಯಾಗಿರು 15 ಸದಸ್ಯರ ತಂಡದಲ್ಲಿ ನನ್ನ ಪಾತ್ರವಿಲ್ಲ. ನನ್ನ ಅಭಿಪ್ರಾಯವೇನಾದರು ಇದ್ದರೆ, ಅದನ್ನು ನೇರವಾಗಿ ನಾಯಕನಿಗೆ ತಿಳಿಸುತ್ತೇನಷ್ಟೆ ಎಂದಿದ್ದಾರೆ.

ABOUT THE AUTHOR

...view details