ಕರ್ನಾಟಕ

karnataka

ETV Bharat / briefs

ನಾನು ಚೆಂಡನ್ನು ನೋಡುತ್ತೇನೆ, ಬೌಲರನ್ನಲ್ಲ: ರಿಷಭ್​ ಪಂತ್​

ಎಸ್​ಆರ್​ಹೆಚ್ ವಿರುದ್ಧ​ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ನೊಂದಿಗೆ​ 48 ರನ್​ ಸಿಡಿಸಿದ ಪಂತ್,​ ಭುವನೇಶ್ವರ್​, ರಶೀದ್​ ಖಾನ್, ಮೊಹಮ್ಮದ್​ ನಬಿರಂತಹ ವಿಶ್ವಶ್ರೇಷ್ಠ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದ್ರು. ಈ ಮೂಲಕ ತಾವು ವಲ್ಡ್‌ಕ್ಲಾಸ್‌ ಬೌಲರ್​ಗಳನ್ನೂ ಎದುರಿಸಲು ಸಮರ್ಥನಿದ್ದೇನೆ ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ರು.

ಪಂತ್​

By

Published : May 9, 2019, 9:13 AM IST

ವಿಶಾಖಪಟ್ಟಣ:ವಿಶ್ವಕಪ್​ ತಂಡದ 15 ಸದಸ್ಯರ ತಂಡದಲ್ಲಿ ಅವಕಾಶ ವಂಚಿತನಾಗಿರುವ ರಿಷಭ್​ ಪಂತ್​ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಬ್ಯಾಟಿಂಗ್​ ಮತ್ತು ಕೀಪಿಂಗ್​ ಎರಡರಲ್ಲೂ ಕ್ರಿಕೆಟ್‌ ಲೋಕಕ್ಕೆ ತೋರಿಸಿದರು.

ನಿನ್ನೆ ನಡೆದ ಎಸ್​ಆರ್​ಹೆಚ್​ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ನೊಂದಿಗೆ 48 ರನ್​ ಸಿಡಿಸಿದ ಪಂತ್​ ಭುವನೇಶ್ವರ್​, ರಶೀದ್​ ಖಾನ್, ಮೊಹಮ್ಮದ್​ ನಬಿರಂತಹ ವಿಶ್ವಶ್ರೇಷ್ಠ ಬೌಲರ್​ಗಳನ್ನು ದಂಡಿಸಿದರು. ಈ ಮೂಲಕ ತಾವು ವಿಶ್ವಶ್ರೇಷ್ಟ ಬೌಲರ್​ಗಳನ್ನೂ ಎದುರಿಸಲು ಸಮರ್ಥನಿದ್ದೇನೆ ಎಂದು ಪ್ರದರ್ಶಿಸಿದರು.

ಶ್ರೇಷ್ಠ ಬೌಲರ್​ಗಳ ಎದುರು ಕೂಡ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ, "ಪ್ರತಿದಿನ ನಮ್ಮ ತಂಡದ ಉತ್ತಮ ಬೌಲರ್​ಗಳ ಜೊತೆ ಅಭ್ಯಾಸ ನಡೆಸುವುದರಿಂದ, ಬ್ಯಾಟಿಂಗ್​ ನಡೆಸಲು ಸುಲಭವಾಯಿತು. ಅಲ್ಲದೆ ತಂಡಕ್ಕೆ ಈ ರೀತಿಯ ಪ್ರದರ್ಶನ ಅವಶ್ಯಕವಾಗಿರುತ್ತದೆ. ಹಾಗಂತ ನಾನೇನು ದೊಡ್ಡ ಹೊಡೆತಕ್ಕೆ ಕೈ ಹಾಕಲಿಲ್ಲ. ಸಮಯ ನೋಡಿ ಆಡಿದೆ. ಅಲ್ಲದೇ ನಾನು ಬೌಲರ್​ ನೋಡಿ ಆಡುವುದಿಲ್ಲ, ಬಾಲ್​ ಮಾತ್ರ ನೋಡುತ್ತೇನೆ" ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜತರಾದ ಪಂತ್​ ಅಭಿಪ್ರಾಯಪಟ್ಟರು.

ಬಿಸಿಸಿಐ ಆಯ್ಕೆ ಸಮಿತಿ ಕೇವಲ ವಿಕೆಟ್​ ಕೀಪಿಂಗ್​ ದೃಷ್ಠಿಯಲ್ಲಿಟ್ಟುಕೊಂಡು ಯುವ ಕೀಪರ್​ ಪಂತ್​ ಬದಲಿಗೆ ದಿನೇಶ್​ ಕಾರ್ತಿಕ್‌ಗೆ ವಿಶ್ವಕಪ್‌ ಆಡಲು ಅವಕಾಶ ನೀಡಿತ್ತು. ಆದರೆ, 12ನೇ ಆವೃತ್ತಿಯಲ್ಲಿ ಸ್ಪೋಟಕ ಬ್ಯಾಟಿಂಗ್​ ಜೊತೆಗೆ ಅತೀ ಹೆಚ್ಚು ಬಲಿ ಪಡೆದ ವಿಕೆಟ್​ ಕೀಪರ್​ ಆಗಿರುವ ಪಂತ್,​ ತಾವು ಯಾವ ಪ್ರತಿಭಾನ್ವಿತ ವಿಕೆಟ್​ ಕೀಪರ್​ಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಪಂತ್​ 15 ಪಂದ್ಯಗಳಿಂದ 18 ಕ್ಯಾಚ್​,2 ರನ್​ಔಟ್​ ಹಾಗೂ 6 ಸ್ಟಂಪ್​ ಮಾಡುವ ಮೂಲಕ 24 ಬಲಿ ಪಡೆದು, ಧೋನಿ (13) ಡಿಕಾಕ್​ (16) ರಂತ ಹಿರಿಯರನ್ನು ಹಿಂದಿಕ್ಕಿದ್ದಾರೆ. ಇದರ ಜೊತೆಗೆ 3 ಅರ್ಧಶತಕಗಳ ಜೊತೆಗೆ 450 ರನ್​ ಗಳಿಸಿ ಡೆಲ್ಲಿ ಕ್ಯಾಪಿಟಲ್​ ಕ್ವಾಲಿಫೈಯರ್​ಗೇರಲು ನೆರವಾಗಿದ್ದರು.

ABOUT THE AUTHOR

...view details