ಕರ್ನಾಟಕ

karnataka

ETV Bharat / briefs

ಕುಡಿದ ಮತ್ತಿನಲ್ಲಿ ಗಲಾಟೆ... ಪತ್ನಿ ಮೂಗು ಕಚ್ಚಿದ ಪತಿ ಮಹಾಶಯ..!

ಕುಡಿದ ಮತ್ತಿನಲ್ಲಿ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿರುವ ಘಟನೆ ಪಂಜಾಬಿನ ಬಟಿಂಡಾದಲ್ಲಿ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದಿಂದ ಉಂಟಾದ ಜಗಳ ಕೊನೆಯಲ್ಲಿ ಪತ್ನಿಯ ಮೂಗು ಕತ್ತರಿಸುವ ಹಂತಕ್ಕೆ ಹೋಗಿದೆ.

ಗಲಾಟೆ

By

Published : May 21, 2019, 2:17 PM IST

ಬಟಿಂಡಾ(ಪಂಜಾಬ್):ಗಂಡ - ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ.. ಗಂಡ - ಹೆಂಡತಿ ಜಗಳ ಮೂಗು ಕುಯ್ಯೋ ತನಕ ಅನ್ನೋದು ಹೊಸ ಗಾದೆ. ಅರೇ.. ಏನಿದು ಅಂತ ಕೇಳ್ತಿದ್ದೀರಾ..? ಈ ಸ್ಟೋರಿ ಓದಿ...

ಕುಡಿದ ಮತ್ತಿನಲ್ಲಿ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿರುವ ಘಟನೆ ಪಂಜಾಬ್​ನ​ ಬಟಿಂಡಾದಲ್ಲಿ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದಿಂದ ಉಂಟಾದ ಜಗಳ ಕೊನೆಯಲ್ಲಿ ಪತ್ನಿಯ ಮೂಗು ಕತ್ತರಿಸುವ ಹಂತಕ್ಕೆ ಹೋಗಿದೆ.

ಆಸ್ಪತ್ರೆ ಸೇರಿರುವ ಪತ್ನಿ ಶೀತಲ್​​

ಘಟನೆಯ ಬಳಿಕ ಪತಿ ಅಮನ್​ದೀಪ್​​​ ಮಿತ್ತಲ್​​ ಪತ್ನಿ ಶೀತಲ್​​​ರನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಪತ್ನಿ ದೂರನ್ನು ದಾಖಲಿಸಿದ್ದಾಳೆ.

ಈ ಪ್ರಕರಣ ಹೊರತಾಗಿ ದಂಪತಿಗಳ ವೈವಾಹಿಕ ಸಂಬಂಧದಲ್ಲಿ ವಿಚಿತ್ರ ಸಾಮ್ಯತೆಯಿದೆ. ಪತ್ನಿ ಶೀತಲ್​​ ಅಮನ್​ದೀಪ್​​ ಎರಡನೇ ಗಂಡನಾಗಿದ್ದರೆ ಅತ್ತ ಪತಿ ಅಮನ್​ದೀಪ್​​ ಮಿತ್ತಲ್​ಗೆ ಇದು ಮೂರನೇ ವಿವಾಹ..!

ABOUT THE AUTHOR

...view details