ನವದೆಹಲಿ:ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಬಗ್ಗೆ ಹೇಮಂತ್ ಕರ್ಕರೆ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ತಂದೆಯ ವೀರಮರಣವನ್ನಪ್ಪಿದ ಹನ್ನೊಂದು ವರ್ಷದ ಬಳಿಕ ಮಾಧ್ಯಮಗಳ ಮುಂದೆ ತಂದೆಯ ಬಗ್ಗೆ ಮಾತನಾಡಿರುವ ಜುಯಿ ನವರೆ, ಅಪ್ಪ ಉಸಿರಿನ ಕೊನೆ ಕ್ಷಣದಲ್ಲೂ ದೇಶಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾಳೆ.