ಗುವಾಹಟಿ:ಗೋಮಾಂಸ ವ್ಯಾಪಾರಿ ವಿರುದ್ಧ ತಿರುಗಿಬಿದ್ದ ಯುವಕರ ಗುಂಪೊಂದು ಆತನನ್ನು ನಡು ಬೀದಿಯಲ್ಲಿ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.
ಶೌಕತ್ ಅಲಿ (68) ಥಳಿತಕ್ಕೊಳಗಾದ ವ್ಯಕ್ತಿ. ಬಿಸ್ವಂತ್ ಚರಿಯಲ್ ನಗರದಲ್ಲಿ ಹೋಟೆಲ್ವೊಂದನ್ನು ನಡೆಸುತ್ತಿದ್ದ ಅವರನ್ನು ಹಿಡಿದು ನಡುಬೀದಿಗೆ ತಂದ ಆಕ್ರೋಶಿತರ ಗುಂಪು ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ.
ಅಲ್ಲದೇ ಶೌಕತ್ಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಗುಂಪನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.