ಕರ್ನಾಟಕ

karnataka

ETV Bharat / briefs

ತುಮಕೂರು ​ಕ್ಷೇತ್ರದಲ್ಲಿ ಜೆಡಿಎಸ್​ - ಬಿಜೆಪಿನ ನಡುವೆ ಸಮಬಲದ ಹೋರಾಟ... ದೊಡ್ಡಗೌಡ್ರಿಗೆ ಜಯ ತರುವುದೇ ಮೈತ್ರಿ ತಂತ್ರ! - ಬಿಜೆಪಿ ಅಭ್ಯರ್ಥಿ

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ. ದೇವೇಗೌಡ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಇಲ್ಲಿ ದೇವೇಗೌಡ, ಬಸವರಾಜ್​ ನಡುವೆ ನೇರ ಹಣಾಹಣಿ. ಗೆಲುವು ಯಾರಿಗೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ನಾಮಪತ್ರ ವಾಪಸ್​ಗೂ ಮುನ್ನ ಸಂಸದ ಮುದ್ದುಹನುಮೇಗೌಡ ಹಾಗೂ ಮಾಜಿ ಶಾಸಕರು ಮಾಜಿ ಪ್ರಧಾನಿ ವಿರುದ್ಧ ಬಂಡೆದಿದ್ದರು. ಆ ಬಳಿಕ ಕಾಂಗ್ರೆಸ್​ ಇವರನ್ನ ತಮಾಣಿ ಮಾಡಿದ್ದರು. ಆದರೆ ಒಳಹೊಡೆತವೇನಾದರೂ ಬಿದ್ದಿದೆಯಾ ಅನ್ನೋದೇ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ದೇವೇಗೌಡ

By

Published : May 22, 2019, 3:47 PM IST

ತುಮಕೂರು: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ. ದೇವೇಗೌಡ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಯಾಕೆಂದರೆ ಹಾಸನ ಕ್ಷೇತ್ರವನ್ನ ಮೊಮ್ಮಗ ಪ್ರಜ್ವಲ್​ ರೇವಣ್ಣನಿಗೆ ಬಿಟ್ಟುಕೊಟ್ಟು ತುಮಕೂರಿಗೆ ವಲಸೆ ಬಂದಿರುವ ದೇವೇಗೌಡರಿಗೆ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರಿಂದ ಪ್ರಬಲ ಸ್ಪರ್ಧೆ ಎದುರಾಗಿದೆ.

ಹೆಚ್ಚು ಮತದಾನ ಯಾರಿಗೆ ವರದಾನ

ವಿಶೇಷ ಎಂದರೆ, ಕಳೆದ ಚುನಾವಣೆಗಿಂತ ಈ ಬಾರಿ 4.51ರಷ್ಟು ಹೆಚ್ಚು ಮತದಾನವಾಗಿದೆ.ಶೇ.77.03ರಷ್ಟು ಜನ ಈ ಜಿಲ್ಲೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ.81.87ರಷ್ಟು ದಾಖಲೆ ಮತದಾನವಾಗಿದೆ. ಅತಿ ಕನಿಷ್ಠ ಮತದಾನ ಶೇ.65.42ರಷ್ಟು ಮತದಾನ ತುಮಕೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಆಗಿದೆ.

ದೇವೇಗೌಡ ವರ್ಸಸ್​ ಬಸವರಾಜು

ಮತದಾನದಿಂದ ಹೊರಗುಳಿದ 3,69,376 ವೋಟರ್ಸ್

3,69,376 ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಿಲ್ಲ. 6,29,248 ಪುರುಷ, 6,09,362 ಮಹಿಳಾ ಮತ್ತು 14 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಮತ ಚಲಾಯಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಶೇ.77.03ರಷ್ಟು ಮತದಾನವಾಗಿದೆ. ಇದುವರೆಗೂ 1984ರಲ್ಲಿ ಗರಿಷ್ಠ ಶೇ.74.22ರಷ್ಟು ಮತದಾನವಾಗಿತ್ತು. ಅಲ್ಲದೆ ಕ್ಷೇತ್ರದಲ್ಲಿ ಈ ಬಾರಿ ಶಾಂತಿಯುತ ಮತದಾನವಾಗಿದ್ದು ಗಮನಾರ್ಹವಾಗಿದೆ.

ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಅಸಮಾಧಾನ ತಣ್ಣಗಾಯಿತಾ?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಜಿಲ್ಲೆಯ ಬಹುತೇಕ ಎಲ್ಲ ಕಾಂಗ್ರೆಸ್ ಮುಖಂಡರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿದ್ದ ಅಸಮಾಧಾನವನ್ನು ಶಮನಗೊಳಿಸಲಾಗಿತ್ತು. ಇನ್ನುಳಿದಂತೆ ಬಹುತೇಕ ಎಲ್ಲೆಡೆ ಕಾಂಗ್ರೆಸ್ ಮುಖಂಡರು ದೇವೇಗೌಡರ ಪರ ಕೆಲಸ ಮಾಡಿದ್ದಾರೆ. ಜೆಡಿಎಸ್ ಮಾಜಿ ಶಾಸಕರು ಸಹ ಉತ್ಸಾಹದಿಂದ ದೇವೇಗೌಡರ ಪರ ಹೋರಾಟ ನಡೆಸಿದ್ದಾರೆ.

ಗೌಡರು ಗೆಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವರ ಸವಾಲ್​

ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಎಸ್.ಆರ್. ಶ್ರೀನಿವಾಸ್ ಒಂದು ಹೆಜ್ಜೆ ಮುಂದೆ ಹೋಗಿ ಮತದಾನದ ದಿನ ಫೇಸ್ ಬುಕ್ ನಲ್ಲಿ ‘ ಗೌಡರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರದೊಂದಿಗೆ ಬರುತ್ತೇನೆ’ ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಎಲ್ಲೆಲ್ಲಿ ಸಮಬಲದ ಹೋರಾಟ

ಬಿಜೆಪಿ ಶಾಸಕರಿರುವ ತಿಪಟೂರು ವಿಧಾನಸಭೆ ಕ್ಷೇತ್ರ, ತುಮಕೂರು ಗ್ರಾಮಾಂತರ , ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದಿದೆ. ಬಿಜೆಪಿ ಶಾಕರಿರುವ ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಲಿದೆ ಎಂಬ ಲೆಕ್ಕಾಚಾರವಿದೆ. ಒಟ್ಟಾರೆ ದೇವೇಗೌಡರು ಕಡಿಮೆ ಅಂತರದಲ್ಲಿಯಾದ್ರೂ ಗೆಲುವು ಸಾಧಿಸಲಿದ್ದಾರೆ ಎಂಬ ಫಲಿತಾಂಶದ ಲೆಕ್ಕಾಚಾರ ಭರ್ಜರಿಯಾಗೇ ನಡೆದಿದೆ.

ಗೆದ್ದೇ ಬಿಡ್ತಾರಾ ಜಿ.ಎಸ್. ಬಸವರಾಜ್​

ಮೊದ ಮೊದಲು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಪರ ಗೆಲುವಿನ ಇತ್ತು. ಆದರೆ ಯಾವಾಗ ದೇವೇಗೌಡರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರೋ ಆಗ ಕಡಿಮೆಯಾಗಿತ್ತು. ಆದ್ರೆ ಮತದಾನ ಹತ್ತಿರವಾಗುತ್ತಿದ್ದಂತೆ ಒಂದು ರೀತಿ ಯುವ ಸಮೂಹ, ಮೋದಿ ಪರವಾಗಿ ಕೆಲಸ ಮಾಡಲು ಆರಂಭಿಸಿತ್ತು. ಬಹುತೇಕ ಯುವಕರು ಪ್ರಧಾನಿ ಆಗಬೇಕೆಂಬ ಹಂಬಲದಿಂದ ಬಿಜೆಪಿಗೆ ಮತ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮತದಾನ ದಾಖಲೆ ಪ್ರಮಾಣದಲ್ಲಿ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾತಿವಾರು ಲೆಕ್ಕಾಚಾರದಲ್ಲಿ ಜಿ.ಎಸ್. ಬಸವರಾಜ್ ಅವರಿಗೆ ಲಿಂಗಾಯತ ಸಮುದಾಯದ ಮತಗಳು ಭಾರಿ ಪ್ರಮಾಣದಲ್ಲಿ ಲಭಿಸಲಿವೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ಯುವ ಮತದಾರರು ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳಿಂದ ಬಸವರಾಜ್ ಗೆಲುವು ಖಚಿತ ಎನ್ನಲಾಗುತ್ತಿದೆ. ಒಟ್ಟಾರೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇರುವುದು ಕ್ಷೇತ್ರದಲ್ಲಿ ಸ್ಪಷ್ಟವಾಗುತ್ತಿದೆ.

ABOUT THE AUTHOR

...view details