ಧಾರವಾಡ: ಇಲ್ಲಿನ ಹಾವೇರಿಪೇಟೆ ಬುರಡಿಗಲ್ಲಿ ನಿವಾಸಿ ಅಬ್ದುಲ್ ಗೌಸ್ ಮಹ್ಮದ್ ಶೇಖ್ ಅವರ ಮಗಳು ಮೇ 4ರಂದು ಕಾಣೆಯಾಗಿದ್ದಾಳೆ. ಕೂಡಲೇ ಹುಡುಕಿ ಕೊಡುವಂತೆ ಪೊಲೀಸರ ನೆರವು ಕೇಳಲಾಗಿದೆ ಎಂದು ತಂದೆ ಶೇಖ್ ಹೇಳಿದರು.
ಮಗಳು ಕಾಣೆ: ಹುಡುಕಿ ಕೊಡುವಂತೆ ತಂದೆಯಿಂದ ಮನವಿ - ಕಾಣೆ
ಧಾರವಾಡದಲ್ಲಿನ ಹಾವೇರಿಪೇಟೆ ಬುರಡಿಗಲ್ಲಿ ನಿವಾಸಿ ಅಬ್ದುಲ್ ಗೌಸ್ ಮಹ್ಮದ್ ಶೇಖ್ ಅವರ ಮಗಳು ಮೇ 4ರಂದು ಕಾಣೆಯಾಗಿದ್ದಾಳೆ. ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ
ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಣೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸ್ ಇಲಾಖೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮಗಳು ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿ ಮನೆಯಲ್ಲಿಯೇ ಇದ್ದಳು. ಈಕೆಗೆ ಇಕ್ಬಾಲ್ ತಮಟಗಾರ ಎಂಬ ವ್ಯಕ್ತಿಯು ಆಗಾಗ್ಗೆ ಮೊಬೈಲ್ ಕರೆ ಹಾಗೂ ಸಂದೇಶ ಕಳುಹಿಸುತ್ತಿದ್ದ. ಅವರ ಜೊತೆಯೇ ಹೋಗಿರಬಹುದು ಎಂಬ ಶಂಕೆ ಇದೆ ಎಂದು ಹೇಳಿದರು.
ಮೇ 4ರ ಮಧ್ಯಾಹ್ನದ ಸುಮಾರಿಗೆ ರಬಾಬ್ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದಾಳೆ. ಮಗಳು ಕಾಣೆಯಾದ ನಂತರ ಇಕ್ಬಾಲ್ ತಮಟಗಾರ ಮನೆಗೆ ಹೋಗಿ ಹುಡುಕಲಾಯಿತು. ಅಲ್ಲಿಯೂ ಸಿಗಲಿಲ್ಲ. ನಿಮ್ಮ ಮಗಳ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಇಕ್ಬಾಲ್ ಕುಟುಂಬಸ್ಥರು ಹೇಳಿದ್ದಾರೆ ಎಂದು ಹೇಳಿದರು. ಉಪನಗರ ಠಾಣೆಯಲ್ಲಿ ದಾಖಲಾಗಿದೆ.