ಕರ್ನಾಟಕ

karnataka

ETV Bharat / briefs

ಶೃಂಗೇರಿ ದರ್ಶನಕ್ಕೆ ದೇವೇಗೌಡ ದಂಪತಿ - ದೇವೇಗೌಡ

ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಆಗಮಿಸಿದ ಮಾಜಿ ಪ್ರಧನಾ ಹೆಚ್.ಡಿ.ದೇವೇಗೌಡ ದಂಪತಿ

ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಆಗಮಿಸಿದ ಮಾಜಿ ಪ್ರಧನಾ ಎಚ್.ಡಿ.ದೇವೇಗೌಡ ದಂಪತಿ

By

Published : May 15, 2019, 10:15 PM IST

ಚಿಕ್ಕಮಗಳೂರು:ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಆಗಮಿಸಿದರು. ಉಡುಪಿಯಿಂದ ನೇರವಾಗಿ ಶೃಂಗೇರಿಯ ಶಾರದಾಂಬೆಗೆ ಆಗಮಿಸಿರುವ ಅವರು, ದೇವಸ್ಥಾನದ ಆವರಣದಲ್ಲಿರುವ ಅತಿಥಿ ಗೃಹದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಶಾರದಾಂಬೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದು, ನಂತರ ಭಾರತೀ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲಿದ್ದಾರೆ. ಶೃಂಗೇರಿ ಶಾರದಾ ಪೀಠದಲ್ಲಿ ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ಉಡುಪಿಯ ಕಾಪುವಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details