ಕೋಲ್ಕತ್ತ: ಕ್ರಿಕೆಟ್ ಮೈದಾನದಲ್ಲಿ ಆಟಗಾರರಿಗೆ ಅವರ ಪ್ರದರ್ಶನ ಹಾಗೂ ಅಂಗಳದಲ್ಲಿ ನಡೆದುಕೊಳ್ಳುವ ರೀತಿಗನುಗುಣವಾಗಿ ಇತರೆ ಆಟಗಾರರು ಅವರಿಗೆ ಅಡ್ಡ ಹೆಸರಿನಿಂದ ಕರೆಯುವುದುಂಟು. ಅದೇ ರೀತಿ ಕೊಹ್ಲಿಗೆ ಹಲವಾರು ಹೆಸರುಗಳಿದ್ದು, ನಿನ್ನೆ ಅವರ ನೆಚ್ಚಿನ ಗೆಳೆಯ ಎಬಿಡಿ ಮತ್ತೊಂದು ಹೆಸರಿಟ್ಟಿದ್ದಾರೆ.
ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಕೊಹ್ಲಿ ಹೆಸರು ದಾಖಲೆಗಳ ಪುಟದಲ್ಲಿ ಸೇರಿಕೊಳ್ಳುತ್ತಿದೆ. ಕೇವಲ ಬ್ಯಾಟ್ನಿಂದ ಮಾತ್ರವಲ್ಲದೆ ಮೈದಾನದಲ್ಲಿ ತಮ್ಮ ಕೋಪದ ನಡವಳಿಕೆಯಿಂದಲೂ ಪ್ರಸಿದ್ಧಿಯಾಗಿದ್ದು, ಈ ಕಾರಣದಿಂದ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಅಂತಲೂ ಕರೆಯುತ್ತಾರೆ. ಇದರ ಜೊತೆಗೆ ರನ್ ಮಷಿನ್, ಕಿಂಗ್ ಕೊಹ್ಲಿ, ಚೇಸಿಂಗ್ ಮಾಸ್ಟರ್, ಚೀಕು ಎಂದು ಕರೆಯುತ್ತಾರೆ.