ಕರ್ನಾಟಕ

karnataka

ETV Bharat / briefs

ಪರಿಸರ ದಿನಾಚರಣೆ.. ರಸ್ತೆಯಲ್ಲಿದ್ದ ಪ್ಲಾಸ್ಟಿಕ್, ಕಸ ಆರಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ..

ಪರಿಸರ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪರಿಸರ ಪ್ರೇಮಿಗಳು ಭಾಗಿಯಾಗಿದ್ಧರು. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಮಾಡಿ ಗಮನ ಸೆಳೆದಿದ್ದ ಜಿಲ್ಲಾಧಿಕಾರಿಗಳು ಇಂದು ಕಸ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ರಸ್ತೆಯಲ್ಲಿ ಪ್ಲಾಸ್ಟಿಕ್, ಕಸ ಆರಿಸಿ ಮಾದರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ

By

Published : Jun 5, 2019, 8:18 PM IST

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ ದಯಾನಂದ ಇವತ್ತು ಸಿಂಪಲಾಗಿದ್ದರು. ಸಾಮಾನ್ಯರಂತೆ ರಸ್ತೆಗಳಲ್ಲಿ ಬಿದ್ದಿದ್ದ ಕಸ

ಎತ್ತಿ ಹಾಕಿ ಮಾದರಿಯಾದರು.

ರಸ್ತೆಯಲ್ಲಿದ್ದ ಪ್ಲಾಸ್ಟಿಕ್, ಕಸ ಆರಿಸಿ ಮಾದರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ ಅವರು ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದಲ್ಲಿ‌ ಸ್ವಚ್ಷತಾ ಅಭಿಯಾನ ನಡೆಸಿದರು. ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.

ಪರಿಸರ ಜಾಥಾದಲ್ಲಿ ತಾವೊಬ್ಬ ಡಿಸಿ ಅನ್ನೋದನ್ನು ಮರೆತು ದಯಾನಂದ ಅವರು ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು‌ ಎತ್ತಿದರು. ಇದನ್ನ ಕಂಡು ಇತರರೂ ಕಸ ಎತ್ತಿ ಹಾಕಿ ಸ್ವಚ್ಛತೆ ಅಭಿಯಾನ ನಡೆಸಿದರು.ಇದಕ್ಕೂ ಮೊದಲು ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿ, ಪರಿಸರ ಸಂರಕ್ಷಣೆ ಮಾಡುವ ಕುರಿತು ಎಲ್ಲರಿಂದಲೂ ಪ್ರಮಾಣ ಮಾಡಿಸಿದರು. ಪರಿಸರದ ಕಲುಷಿತ ಹಾಗೂ ಅರಣ್ಯ ನಾಶದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದನ್ನು ತಿಳಿಸಿದರು. ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧರು.

ABOUT THE AUTHOR

...view details