ಚೆನ್ನೈ: ಕೊನೆಯ ಓವರ್ನಲ್ಲಿ ಗೆಲುವಿಗೆ ಅಗತ್ಯವಿದ್ದ 18 ರನ್ಗಳನ್ನು ಸಿಡಿಸುವ ಮೂಲಕ ಹಾಲಿ ಚಾಂಪಿಯನ್ ಸಿಎಸ್ಕೆ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ಗೆಲುವಿಗೆ ಅಗತ್ಯವಿದ್ದ 152 ರನ್ಗಳನ್ನು ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ 4 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ರಾಜಸ್ಥಾನ ನೀಡಿದ 152 ರನ್ಗಳನ್ನು ಬೆನ್ನೆತ್ತಿದ ಸಿಎಸ್ಕೆ 24 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಅಘಾತ ಅನುಭವಿಸಿತ್ತು. ಮೊದಲ ಓವರ್ನಲ್ಲಿ ವಾಟ್ಸನ್ ಸೊನ್ನೆ ಸುತ್ತಿದರೆ, ರೈನಾ ರನ್ಔಟ್ ಬಲೆಗೆ ಬಿದ್ದರು. ಪ್ಲೆಸಿಸ್(7) ಜಾಧವ್ ಒಂದು ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ರಾಯುಡು(57) ಹಾಗೂ ಧೋನಿ (58) 5 ನೇ ವಿಕೆಟ್ಗೆ 105 ರನ್ಗಳ ಜೊತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಕೊನೆಯಲ್ಲಿ ಜಡೇಜಾ 3 ಬಾಲಿಗೆ 9 ಹಾಗೂ ಸ್ಯಾಂಟ್ನರ್ 4 ಬಾಲಿಗೆ 10 ರನ್ಗಳಿಸಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ದಾಟಿಸಿದರು.
ರೋಚಕ ಕೊನೆಯ ಓವರ್:
ಸಿಎಸ್ಕೆ ಗೆಲುವಿಗೆ 18 ರನ್ಗಳ ಅಗತ್ಯವಿತ್ತು. ಇಂಗ್ಲೆಂಡ್ನ ವೇಗಿ ಬೆನ್ಸ್ಟೋಕ್ಸ್ ಎಸೆದ ಮೊದಲ ಎಸೆತದಲ್ಲಿ ಜಡೇಜಾ ಸಿಕ್ಸರ್ ಸಿಡಿಸಿದರು. ನಂತರದ ನೋಬಾಲ್ ಎಸೆತಕ್ಕೆ ಒಂದು ತೆಗೆದರು. ಧೋನಿ 2ನೇ ಎಸೆತದಲ್ಲಿ 2 ರನ್ ತೆಗೆದು 3ನೇ ಎಸೆತದಲ್ಲಿ ಬೌಲ್ಡ್ ಆದರು. ಕೊನೆಯ 3 ಎಸೆತಗಳಿಗೆ 8 ರನ್ಗಳ ಅಗತ್ಯವಿತ್ತು. 4 ಮತ್ತು 5ನೇ ಎಸೆತದಲ್ಲಿ ಸ್ಯಾಂಟ್ನರ್ 4 ರನ್ಗಳಿಸಿದರು. ಕೊನೆಯ ಎಸೆತಕ್ಕೆ 4 ರನ್ಗಳ ಅಗತ್ಯವಿತ್ತು. ಸ್ಟೋಕ್ಸ್ ಮತ್ತೆ ವೈಡ್ ಎಸೆದರು. ಗೆಲವಿಗೆ 3 ರನ್ಗಳ ಅಗತ್ಯವಿದ್ದಾಗ ಕೊನೆಯ ಎಸೆತದಲ್ಲಿ ಸ್ಯಾಂಟ್ನರ್ ಸಿಕ್ಸರ್ ಸಿಡಿಸಿ ಸಿಎಸ್ಕೆಗೆ ಗೆಲುವು ತಂದು ಕೊಟ್ಟರು.
2016 ಟಿ 20 ವಿಶ್ವಕಪ್ ಫೈನಲ್ನ ಕೊನೆಯ ಓವರ್ನಲ್ಲಿ19 ರನ್ ಅಗತ್ಯವಿದ್ದಾಗ ಬ್ರಾತ್ವೈಟ್ರಿಂಧ ಸತತ 4 ಸಿಕ್ಸರ್ ಸಿಡಿಸಿಕೊಳ್ಳುವ ಮೂಲಕ ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್ ಮತ್ತೊಮ್ಮೆ 18 ರನ್ಗಳಿಗೆ ಕೊನೆಯ ಓವರ್ ನಿಯಂತ್ರಿಸಲಾಗದೆ ರಾಜಸ್ಥಾನ್ ಕೈಲಿದ್ದ ಗೆಲುವನ್ನು ಸಿಎಸ್ಕೆ ಕೈ ಸೇರುವಂತೆ ಮಾಡಿದರು.
ರೋಚಕವಾಗಿ ಕೂಡಿದ್ದ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ನಡೆಸಿದ ರಾಜಸ್ಥಾನ್ ತಂಡದ ಪರ ಜೋಫ್ರಾ ಆರ್ಚರ್ 4 ಓವರ್ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರೆ, ಉನ್ನಾದ್ಕಟ್ 3 ಓವರ್ಗಳಲ್ಲಿ 23ಕ್ಕೆ1, ಬೆನ್ಸ್ಟೋಕ್ಸ್ 39ಕ್ಕೆ 2 ವಿಕೆಟ್, ಕುಲಕರ್ಣಿ 3 ಓವರ್ಗಳಲ್ಲಿ 14 ರನ್ ನೀಡಿ 1 ವಿಕೆಟ್ ಪಡೆದು ಸಿಎಸ್ಕೆ ಬ್ಯಾಟ್ಸ್ಮನ್ಗಳನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು.
ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 150 ರನ್ಗಳಿಸಿತು. ಬಟ್ಲರ್ ಆರ್ಭಟ 23 ಕ್ಕೆ ಸೀಮಿತವಾದರೆ, ರಹಾನೆ 14, ಸ್ಟಿವ್ ಸ್ಮಿತ್ 15, ಸ್ಟೋಕ್ಸ್ 28, ಗೋಪಾಲ್ 19,ಪರಾಗ್ 16,ತ್ರಿಪಾಠಿ 10, ಆರ್ಚರ್ 13 ರನ್ಗಳಿಸಿದರು.
ಜಡೇಜಾ 20 ಕ್ಕೆ 2, ಶಾರ್ದುಲ್ ಟಾಕೂರ್ 44 ಕ್ಕೆ 2, ದೀಪಕ್ ಚಹಾರ್ 33 ಕ್ಕೆ 2, ಸ್ಯಾಂಟ್ನರ್ 25 ಕ್ಕೆ 1 ವಿಕೆಟ್ ಪಡೆದು ರಾಯಲ್ಸ್ ತಂಡವನ್ನು 151ಕ್ಕೆ ಕಟ್ಟಿಹಾಕಿದ್ದರು.