ಕರ್ನಾಟಕ

karnataka

ETV Bharat / briefs

ಐಪಿಎಲ್​ ನೋಡಿ ಮನೆಗೆ ಹೋಗೋದು ಸುಲಭ... ನಿಮಗಾಗಿ ಕಾಯಲಿದೆ ರಾಜ್ಯ ಸಾರಿಗೆ ಬಸ್​ - RCB

ಐಪಿಎಲ್​ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಕ್ರೀಡಾಂಗಣಕ್ಕೆ ರಾತ್ರಿ 08.00 ಗಂಟೆಗೆ ಸರಿಯಾಗಿ ತಲುಪಲು ಅನುಕೂಲವಾಗುವಂತೆ ಸಂಜೆ 06.00 ಗಂಟೆಯ ನಂತರ ನಗರದ ವಿವಿಧ ಭಾಗಗಳಿಂದ ಬಸ್ಸುಗಳು ಹೊರಡಲಿದೆ.

BMTC

By

Published : Mar 27, 2019, 9:57 PM IST

Updated : Mar 28, 2019, 11:49 AM IST

ಬೆಂಗಳೂರು: IPL-2019 ಕ್ರಿಕೆಟ್ ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕ ಹೆಚ್ಚಿನ ಬಸ್ಸುಗಳನ್ನು ನಿಯೋಜನೆ ಮಾಡಿದೆ.

ಮಾರ್ಚ್ 28, ಏಪ್ರಿಲ್ 05, 07, 21,24, 30 ಮತ್ತು ಮೇ 04 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಕ್ರಿಕೆಟ್ ವೀಕ್ಷಣೆಗೆ ಬಂದು ಹೋಗುವ ಪ್ರೇಕ್ಷಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆಯಲ್ಲಿ ಇರಲಿದೆ..

ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಕ್ರೀಡಾಂಗಣಕ್ಕೆ ರಾತ್ರಿ 08.00 ಗಂಟೆಯವರೆಗೆ ತಲುಪಲು ಅನುಕೂಲವಾಗುವಂತೆ ಸಂಜೆ 06.00 ಗಂಟೆಯ ನಂತರ ನಗರದ ವಿವಿಧ ಭಾಗಗಳಿಂದ ಬಸ್ಸುಗಳು ಹೊರಡಲಿದೆ.

ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದು ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ಸಂಚಾರದ ಒತ್ತಡ ಅನುಗುಣವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಹೆಚ್ಚುವರಿ ಬಸ್ಸುಗಳನ್ನು ಹಾಕಲಾಗಿದೆ ಎಂದು ನಿಗಮತಿಳಿಸಿದೆ.

Last Updated : Mar 28, 2019, 11:49 AM IST

ABOUT THE AUTHOR

...view details