ಕರ್ನಾಟಕ

karnataka

ETV Bharat / briefs

ಮದುವೆ ಶಾಸ್ತ್ರ ಮಾಡಲು ಬಂದಿದ್ದ ಪುರೋಹಿತನ ಜತೆ ಓಡಿಹೋದ ನವವಿವಾಹಿತೆ! - ಪುರೋಹಿತ

ಮದುವೆ ಮಾಡಿಸಲು ಬಂದಿದ್ದ ಪೂಜಾರಿ ಜತೆ ನವವಿವಾಹಿತೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದೀಗ ಆಕೆಯ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

By

Published : May 30, 2019, 8:20 AM IST

ವಿದಿಶಾ(ಮಧ್ಯಪ್ರದೇಶ):ಮದುವೆ ಶಾಸ್ತ್ರ ಮಾಡಲು ಆಗಮಿಸಿದ್ದ ಪುರೋಹಿತನ ಜತೆ ನವವಿವಾಹಿತೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ವಿದಿಶಾದ ತೂರಿಬಾಗರೊಡ್​ ಗ್ರಾಮದಲ್ಲಿ ನಡೆದಿದೆ.

ಮದುವೆಯಾಗಿ 14 ದಿನ ಕಳೆದ ಬಳಿಕ ನವವಿವಾಹಿತೆ ಮದುವೆ ಶಾಸ್ತ್ರ ಮಾಡಲು ಬಂದಿದ್ದ ವ್ಯಕ್ತಿ ವಿನೋದ್​ ಮಹಾರಾಜ್​​ ಜತೆ ಪರಾರಿಯಾಗಿದ್ದಾಳೆ.

ಮೇ 7ರಂದು ತೂರಿಬಾಗರೊಡ್​ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಅದೇ ಗ್ರಾಮದ ದೇವಸ್ಥಾನದ ಪುರೋಹಿತ ವಿನೋದ್ ಮಹಾರಾಜ್ ಮದುವೆ ಮಾಡಿಸಲು ಆಗಮಿಸಿದ್ದರು. ಮದುವೆಯ ಮೂರು ದಿನಗಳ ಬಳಿಕ ಮಹಿಳೆ ತವರಿಗೆ ಬಂದಿದ್ದಳು ಎನ್ನಲಾಗಿದೆ.

ಮೇ 23ರಂದು ಇಬ್ಬರು ಪರಾರಿಯಾಗಿದ್ದು, 21 ವರ್ಷದ ರೀನಾ ಬಾಯಿ, ಹಣ, ಬಂಗಾರ ತೆಗೆದುಕೊಂಡು ಹೋಗಿದ್ದಾಳೆಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಇವರಿಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಈಗಾಗಲೇ ಪೂಜಾರಿಗೆ ಎರಡು ಮಕ್ಕಳಿವೆ ಎಂದು ತಿಳಿದು ಬಂದಿದೆ.

ABOUT THE AUTHOR

...view details