ಕರ್ನಾಟಕ

karnataka

ETV Bharat / briefs

ಬಿಜೆಪಿಯಿಂದ ದೀದಿಗೆ ಹತ್ತು ಲಕ್ಷ 'ಜೈ ಶ್ರೀರಾಮ್'​​ ಕಾರ್ಡ್​ ಗಿಫ್ಟ್​​...! - ಅರ್ಜುನ್ ಸಿಂಗ್

ಜೈ ಶ್ರೀರಾಮ್ ಎಂದು ಬರೆದಿರುವ ಹತ್ತು ಲಕ್ಷ ಕಾರ್ಡ್​ಗಳನ್ನು ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ದೀದಿ

By

Published : Jun 2, 2019, 9:22 AM IST

ಕೋಲ್ಕತ್ತಾ: ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರನ್ನು ಅಡ್ಡಗಟ್ಟಿದ ಕೆಲವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದೀಗ ಮಮತಾ ಬ್ಯಾನರ್ಜಿಗೆ ಬಿಜೆಪಿ ಸ್ಪೆಷಲ್ ಗಿಫ್ಟ್ ನೀಡಲು ತೀರ್ಮಾನಿಸಿದೆ.

ಜೈ ಶ್ರೀರಾಮ್ ಎಂದು ಬರೆದಿರುವ ಹತ್ತು ಲಕ್ಷ ಕಾರ್ಡ್​ಗಳನ್ನು ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಅರ್ಜುನ್​ ಸಿಂಗ್​ ಕೆಲ ತಿಂಗಳ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಇದೀಗ ತಮ್ಮ ಮಾಜಿ ಪಕ್ಷ ಮುಖ್ಯಸ್ಥರಿಗೆ ವಿಶೇಷ ಗಿಫ್ಟ್ ನೀಡಲು ಸಿದ್ಧರಾಗಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಉಭಯ ಪಕ್ಷಗಳ ನಡುವಿನ ವಾಕ್ಸಮರ ಹಾಗೂ ಗಲಾಟೆಗಳು ತಾರಕಕ್ಕೇರಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.

ABOUT THE AUTHOR

...view details