ಕರ್ನಾಟಕ

karnataka

By

Published : May 1, 2019, 7:01 PM IST

ETV Bharat / briefs

ಆಟಗಾರರಿಗೆ ಪಾಕ್‌ ಟೀಂ ಹೋಲುವ ಜರ್ಸಿ! ನಗೆಪಾಟಲಿಗೀಡಾದ ಬಾಂಗ್ಲಾ ಕ್ರಿಕೆಟ್​ ಬೋರ್ಡ್​!

ವಿಶ್ವಕಪ್​ಗಾಗಿ ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಅನಾವರಣಗೊಳಿಸಿದ್ದು, ಇದೀಗ ಅದು ನಗೆಪಾಟಲಿಗೊಳಗಾಗಿದೆ.

ಬಾಂಗ್ಲಾ ಕ್ರಿಕೆಟ್​ ಟೀಂ

ಢಾಕಾ:ಮುಂಬರುವ ವಿಶ್ವಕಪ್​ಗಾಗಿ ಎಲ್ಲ ತಂಡಗಳು ಹೊಸ ಹೊಸ ಜರ್ಸಿ ಅನಾವರಣ ಮಾಡುತ್ತಿದ್ದು, ಬಾಂಗ್ಲಾ ಕ್ರಿಕೆಟ್​ ಮಂಡಳಿ ಮಾತ್ರ ನಗೆಪಾಟಲಿಗೆ ಒಳಗಾಗಿದೆ.

ವಿಶ್ವಕಪ್​ಗಾಗಿ ಆಯ್ಕೆಗೊಂಡಿರುವ ಆಟಗಾರರಿಗೆ ಹೊಸ ಜರ್ಸಿ ತಯಾರು ಮಾಡುವ ಭರದಲ್ಲಿ ಬಾಂಗ್ಲಾದೇಶ ಎಡವಟ್ಟು ಮಾಡಿಕೊಂಡಿದೆ. ದೇಶದ ಆಟಗಾರರಿಗೆ ಪಾಕ್​ ಕ್ರಿಕೆಟ್​ ತಂಡವನ್ನು ಹೋಲುವ ಜರ್ಸಿ ಸಿದ್ಧಪಡಿಸಿದ್ದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಬಿಸಿಬಿ ತದನಂತರ ಬದಲಾವಣೆ ಮಾಡಿದೆ. ವಿಶೇಷವೆಂದರೆ ಬಾಂಗ್ಲಾದ ಬಾವುಟ ಕೆಂಪು ಮತ್ತು ಹಸಿರು ಬಣ್ಣದಿಂದ ಕೂಡಿದೆ. ಆದರೆ ಹೊಸ ಜರ್ಸಿ ಕೇವಲ ಹಸಿರು ಬಣ್ಣದಿಂದ ಕೂಡಿರುವುದು ಅಚ್ಚರಿ ಮೂಡಿಸಿದೆ.

ABOUT THE AUTHOR

...view details