ಟೌಂಟನ್: ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್ ಶತಕ(107) ಹಾಗೂ ನಾಯಕ ಫಿಂಚ್(82) ಅರ್ಧಶತಕದ ನೆರವಿನಿಂದ ಆಸೀಸ್ 307 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಕ್ಕೆ ವಾರ್ನರ್ ಹಾಗೂ ಫಿಂಚ್ 146 ರನ್ಗಳ ಜೊತೆಯಾಟ ನೀಡಿದರು. 84 ಎಸೆತಗಳಲ್ಲಿ 82 ರನ್ ಗಳಿಸಿದ್ದ ಫಿಂಚ್ 23ನೇ ಓವರ್ನಲ್ಲಿ ಅಮೀರ್ಗೆ ವಿಕೆಟ್ ಒಪ್ಪಿಸಿದರು. ಫಿಂಚ್ ಔಟದ ನಂತರ ಬಂದ ಮಾಜಿ ನಾಯಕ ಸ್ಟಿವ್ ಸ್ಮಿತ್ 10, ಮ್ಯಾಕ್ಸ್ವೆಲ್ 20 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು.
ವಿಕೆಟ್ ಬೀಳುತ್ತಿದ್ದರು ಉತ್ತಮ ಆಟ ಪ್ರದರ್ಶಿಸಿದ ವಾರ್ನರ್ 111 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 107 ರನ್ ಗಳಿಸಿ ಶಾಹೀನ್ ಆಫ್ರಿದಿಗೆ ವಿಕೆಟ್ ಒಪ್ಪಿಸಿದರು.
ವಾರ್ನರ್ ಔಟಾದ ನಂತರ ಪಾಕಿಸ್ತಾನ ಬೌಲರ್ಗಳು ಮೇಲುಗೈ ಸಾಧಿಸಿದರು. ಶಾನ್ ಮಾರ್ಶ್ (23), ಖವಾಜ(18), ಅಲೆಕ್ಸ್ ಕ್ಯಾರಿ (20) ಅಮೀರ್ಗೆ ವಿಕೆಟ್ ಒಪ್ಪಿಸಿದರು. ಬಾಲಂಗೋಚಿಗಳಾದ ನಥನ ಕೌಲ್ಟರ್ ನೈಲ್(2), ಪ್ಯಾಟ್ ಕಮ್ಮಿನ್ಸ್(2), ಸ್ಟಾರ್ಕ್(3) ಪಾಕಿಸ್ತಾನದ ಬೌಲಿಂಗ್ ಮುಂದೆ ನಿಲ್ಲಲಾರದೆ ಹೋದರು.
ಆಸ್ಟ್ರೇಲಿಯ 49 ಓವರ್ಗಳಲ್ಲಿ 307 ರನ್ ಗಳಿಸಿ ಆಲೌಟ್ ಆಯಿತು. ಅಮೀರ್ 5 ವಿಕೆಟ್, ಶಾಹೀನ್ ಅಫ್ರಿದಿ 2, ಹಸನ್ ಅಲಿ, ವಹಾಬ್ ರಿಯಾಜ್ ಹಾಗೂ ಮೊಹಮ್ಮದ್ ಹಫೀಜ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.