ಕರ್ನಾಟಕ

karnataka

ETV Bharat / briefs

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಅಕುಲ್​ - ನಿರೂಪಕ ಅಕುಲ್ ಬಾಲಾಜಿ

ನಿರೂಪಣೆ ಮೂಲಕ ಜನ ಪ್ರಸಿದ್ಧಿ ಪಡೆದಿರುವ ಅಕುಲ್​ ಬಾಲಾಜಿ ಭಾನುವಾರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಕುಟುಂಬಸ್ಥರೊಂದಿಗೆ ಅದ್ಧೂರಿಯಾಗಿ ಬರ್ತ್​ಡೇ ಸೆಲೆಬ್ರೇಟ್​​ ಮಾಡಿದರು.

Anchor Akul Balaji celebrating his birthday
ಅಕುಲ್​ಗೆ ಹುಟ್ಟುಹಬ್ಬದ ಸಂಭ್ರಮ

By

Published : Feb 24, 2020, 2:59 AM IST

ವಿಭಿನ್ನ ಶೈಲಿಯ ನಿರೂಪಣೆಯ ಮೂಲಕ ಮನೆ ಮಾತಾಗಿರುವ ಹ್ಯಾಂಡ್​ಸಮ್​ ಆ್ಯಂಕರ್​ ಅಕುಲ್ ಬಾಲಾಜಿಗೆ ಭಾನುವಾರ ಜನುಮದಿನದ ಸಂಭ್ರಮ. ಸ್ನೇಹಿತರು ಮತ್ತು ಕುಟುಂಬದವರೊಡನೆ ಅಕುಲ್ ಬಹಳ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಕುಲ್​ಗೆ ಹುಟ್ಟುಹಬ್ಬದ ಸಂಭ್ರಮ

ಈ ಸಂಭ್ರಮದ ಸುಮಧುರ ಕ್ಷಣವನ್ನು ಅಕುಲ್ ಪತ್ನಿ ಜ್ಯೋತಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ ಅಷ್ಟೊಂದು ಖ್ಯಾತಿ ಪಡೆಯದ ಅಕುಲ್​ಗೆ ಜನಪ್ರಿಯತೆ ಗಳಿಸಿದ್ದು ನಿರೂಪಣೆಯಿಂದ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಕುಣಿಯೋಣು ಬಾರಾ' ಕಾರ್ಯಕ್ರಮದ ನಿರೂಪಕರಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಅಕುಲ್ ಮತ್ತೆ ಹಿಂತಿರುಗಿ ನೋಡಲೇಯಿಲ್ಲ. ಆಷ್ಟರಲ್ಲಾಗಲೇ ಅದೃಷ್ಟ ದೇವತೆ ಅವರ ಕೈ ಹಿಡಿದು ಬಿಟ್ಟಿತ್ತು. ಮುಟ್ಟಿದ್ದೆಲ್ಲವೂ ಚಿನ್ನ ಎಂಬ ಹಾಗೆ ಎಲ್ಲಾ ಕಾರ್ಯಕ್ರಮದಲ್ಲೂ ಅಕುಲ್ ನಿರೂಪಣೆ ಖಾಯಂ.

ಅಕುಲ್​ಗೆ ಹುಟ್ಟುಹಬ್ಬದ ಸಂಭ್ರಮ

ಕಾಮಿಡಿ ಕಿಲಾಡಿಗಳು, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೆಗೆ ಬಂದ, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ನೋಡಿ ಸ್ವಾಮಿ ನಾವಿರೋದೇ ಹೀಗೆ, ಹೊಸ ಲವ್ ಸ್ಟೋರಿ, ಡ್ಯಾನ್ಸಿಂಗ್ ಸ್ಟಾರ್, ತಕಧಿಮಿತ, ಮನೆ ಮುಂದೆ ಮಹಾಲಕ್ಷ್ಮಿ, ಇಂಡಿಯನ್, ಡ್ಯಾನ್ಸಿಂಗ್ ಸ್ಟಾರ್ ಸಿರೀಸ್, ಸೂಪರ್ ಜೋಡಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ನಿರೂಪಕರಾಗಿ ಗಮನ ಸೆಳೆದಿರುವ ಅಕುಲ್ ಬಾಲಾಜಿ ತಮ್ಮ ಜನುಮದಿನದ ಸಂಭ್ರಮದಲ್ಲಿ ಬ್ಯುಸಿಯಾಗಿದ್ದರು.

ABOUT THE AUTHOR

...view details