ಕರ್ನಾಟಕ

karnataka

ETV Bharat / briefs

ಅಡಿಕೆ ಮರ ಏರುವ ಯಂತ್ರ ಕಂಡುಹಿಡಿದ ಭಟ್ಟರ ಸಾಧನೆಗೆ ಮಹೀಂದ್ರ ಗ್ರೂಪ್​ ಅಧ್ಯಕ್ಷರ ಶ್ಲಾಘನೆ

ಅಡಿಕೆ ಮರವೇರಲು ಯಂತ್ರವೊಂದನ್ನು ಆವಿಷ್ಕಾರ ಮಾಡಿದ ಬಂಟ್ವಾಳ ತಾಲೂಕಿನ ಪಣೋಲಿಬೈಲು ಸಮೀಪದ ಕೋಮಾಲಿಯ ಗಣಪತಿ ಭಟ್ಟ ಅವರ ಸಾಧನೆಗೆ‌ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಭಾರತದ ಬಹುದೊಡ್ಡ ಉದ್ಯಮಿ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮೂಲಕ  ಗಣಪತಿ ಭಟ್ಟರ ಸಾಧನೆಯನ್ನು ಶ್ಲಾಘಿಸಿದ್ದಾರೆ. ‌

ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ

By

Published : Jun 20, 2019, 1:33 AM IST

ಮಂಗಳೂರು: ಮಹೀಂದ್ರ ಗ್ರೂಪ್​ನಆನಂದ್ ಮಹೀಂದ್ರ ಅವರು ಅಡಿಕೆ ಮರವೇರುವ ಈ ಯಂತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, 'ಹೌ ಕೂಲ್ ಈಸ್ ದಿಸ್' ಎಂದು ಹೇಳಿದ್ದಾರೆ.

ಈ ಯಂತ್ರ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗುವುದು ಮಾತ್ರವಲ್ಲ, ಕಡಿಮೆ ತೂಕದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೆ ತಮ್ಮ ಸಿಬ್ಬಂದಿ ಮೂಲಕ ಗಣಪತಿ ಭಟ್ ರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.


ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ

ಕೇವಲ 28 ಕೆಜಿ ಯಂತ್ರ ಗಂಟೆಗೆ ಸುಮಾರು 80 ಅಡಿಕೆ ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಪ್ರಯೋಜನ ಆಗಲಿದೆ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯಲು, ಔಷಧಿ ಸಿಂಪಡಿಸಲು ಕಾರ್ಮಿಕರ ಕೊರತೆಯಿದೆ. ಸ್ವತಃ ಈ ಸಮಸ್ಯೆಯನ್ನು ಅನುಭವಿಸಿದ ಗಣಪತಿ ಭಟ್ಟ​ರ ಸತತ ಸಂಶೋಧನೆಯ ಫಲವೇ ಈ ಅಡಿಕೆ ಮರ ಏರುವ ಯಂತ್ರ. ಇಂದು ಈ ಯಂತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದು, ಗಣಪತಿ ಭಟ್ಟರಿಗೆ ಸತತವಾಗಿ ಫೋನ್​ಗಳ ಸುರಿಮಳೆಯೇ ಬರುತ್ತಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಭಟ್ಟರು, ಅಡಿಕೆ ಮರ ಏರುವ ಯಂತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ನಮ್ಮ ಮನೆಗೆ ಬಂದು ಅದನ್ನು ವೀಕ್ಷಣೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಮಹೀಂದ್ರ ಕಂಪನಿಯ ಅಧ್ಯಕ್ಷರು ಈ ಯಂತ್ರದ ಬಗ್ಗೆ ಶ್ಲಾಘನೆ ಮಾಡಿ ಟ್ವೀಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಆದರೆ ನಮಗೆ ಅದರ ಆಸೆ ಆಕಾಂಕ್ಷೆ ಯಾವುದೂ ಇಲ್ಲ. ನಾವು ಈ ಯಂತ್ರವನ್ನು ಯಶಸ್ವಿಯಾಗಿ ಆವಿಷ್ಕಾರ ಮಾಡಿದ್ದೇವೆ. ಇದನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಈಗಾಗಲೇ ಈ ಯಂತ್ರ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ‌. 7-8 ದಿನಗಳಲ್ಲಿ ಒಂದು ಯಂತ್ರ ತಯಾರಿಸಿ ಕೊಡುವ ಉದ್ದೇಶ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.

For All Latest Updates

ABOUT THE AUTHOR

...view details